ವರದಿ : ಪ್ರಭು ವಿ ಎಸ್.
ಪಟ್ಟಣದ ಮಹಾವೀರ ಜೈನ್ ಸಂಘದ ವತಿಯಿಂದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಸಂಘಟನೆಯ ಪದಾಧಿಕಾರಿಗಳು ಆಚರಿಸಿದರು.
ಪಟ್ಟಣದ ಕೋಟೇಬೀದಿಯ ಜೈನ ಮಂದಿರದಿಂದ ಮೆರವಣಿಗೆ ಮೂಲಮಾಕ ಹೊರಟ ಸಮಾಜದ ಮುಖಂಡರು ಮತ್ತು ಮಹಿಳೆಯರು ಶಾಂತಿಧೂತ ಮಹಾವೀರರ ಪರ ಘೋಷಣೆಗಳನ್ನು ಕೂಗಿತ್ತಾ ಪೇಟೇಬೀದಿ ಮೂಲಕ ಪ್ರವಾಸಿ ಮಂದಿರದ ವೃತ್ತದವರೆಗೆ ಸಾಗಿದರು.
ಬೆಳ್ಳಿ ಸಾರೋಟಿನಲ್ಲಿ ಅಲಂಕೃತ ಮಹಾವೀರರ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿದ ಬಳಿಕ ಪಟ್ಟಣದಾದ್ಯಂತ ಮೆರವಣಿಗೆಯಲ್ಲಿ ತೆರಳಿ ಭಕ್ತಿ ಸಮರ್ಪಿಸಿದರಲ್ಲದೇ ಕಾರ್ಯಕ್ರಮದ ಅಂಗವಾಗಿ ಜೈನ ಸಮಾಜದ ವತಿಯಿಂದ ಆಯೋಜಿಸಿದ್ದ ಅನ್ನಸಂತರ್ಪಣೆ ವೇಳೆ ಸಾವಿರಾರು ಮಂದಿ ಪಾಲ್ಗೊಂಡರು.
ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಗೌತಮ್ಚಂದ್, ಪುರಸಭೆ ಸದಸ್ಯ ಭರತ್ಕುಮಾರ್, ಸಮಾಜದ ಮುಖಂಡರಾದ ಮದನ್ಲಾಲ್, ಮಹಾವೀರ್, ವಿನೋದ್, ಹರಿಯನ್, ನಿತೀನ್, ಶುಭಂ, ಆಸೀಸ್, ಕಿಶಾನ್ಲಾಲ್, ಮಹೇಂದ್ರ ಇತರರಿದ್ದರು.




