Friday, November 20, 2026

ಪ್ರಾಯೋಗಿಕ ಆವೃತ್ತಿ

ಮಹಾವೀರ ಜೈನ್ ಸಂಘದ ವತಿಯಿಂದ ಭಗವಾನ್ ಮಹಾವೀರ ಜಯಂತಿ ಆಚರಣೆ

ವರದಿ : ಪ್ರಭು ವಿ ಎಸ್. 

ಪಟ್ಟಣದ ಮಹಾವೀರ ಜೈನ್ ಸಂಘದ ವತಿಯಿಂದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಸಂಘಟನೆಯ ಪದಾಧಿಕಾರಿಗಳು ಆಚರಿಸಿದರು.

ಪಟ್ಟಣದ ಕೋಟೇಬೀದಿಯ ಜೈನ ಮಂದಿರದಿಂದ ಮೆರವಣಿಗೆ ಮೂಲಮಾಕ ಹೊರಟ ಸಮಾಜದ ಮುಖಂಡರು ಮತ್ತು ಮಹಿಳೆಯರು ಶಾಂತಿಧೂತ ಮಹಾವೀರರ ಪರ ಘೋಷಣೆಗಳನ್ನು ಕೂಗಿತ್ತಾ ಪೇಟೇಬೀದಿ ಮೂಲಕ ಪ್ರವಾಸಿ ಮಂದಿರದ ವೃತ್ತದವರೆಗೆ ಸಾಗಿದರು.

ಬೆಳ್ಳಿ ಸಾರೋಟಿನಲ್ಲಿ ಅಲಂಕೃತ ಮಹಾವೀರರ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿದ ಬಳಿಕ ಪಟ್ಟಣದಾದ್ಯಂತ ಮೆರವಣಿಗೆಯಲ್ಲಿ ತೆರಳಿ ಭಕ್ತಿ ಸಮರ್ಪಿಸಿದರಲ್ಲದೇ ಕಾರ್ಯಕ್ರಮದ ಅಂಗವಾಗಿ ಜೈನ ಸಮಾಜದ ವತಿಯಿಂದ ಆಯೋಜಿಸಿದ್ದ ಅನ್ನಸಂತರ್ಪಣೆ ವೇಳೆ ಸಾವಿರಾರು ಮಂದಿ ಪಾಲ್ಗೊಂಡರು.

ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಗೌತಮ್‌ಚಂದ್, ಪುರಸಭೆ ಸದಸ್ಯ ಭರತ್‌ಕುಮಾರ್, ಸಮಾಜದ ಮುಖಂಡರಾದ ಮದನ್‌ಲಾಲ್, ಮಹಾವೀರ್, ವಿನೋದ್, ಹರಿಯನ್, ನಿತೀನ್, ಶುಭಂ, ಆಸೀಸ್, ಕಿಶಾನ್‌ಲಾಲ್, ಮಹೇಂದ್ರ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ