ಎಸ್.ಡಿ. ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಡಾ.ಪರಮೇಶ್ವರ್ ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಅವರ ಪರವಾಗಿ ಕ್ಷೇತ್ರವಾಪ್ತಿಯ ಮಾರಗೌಡನಹಳ್ಳಿ ಗುರುವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಮಾರಗೌಡನಗಳ್ಳಿ ಉತ್ತಮ ಗ್ರಾಮವಾಗಿದೆ ಎಂಬ ಹೆಗ್ಗಳಿಕೆಯಿದೆ, ಪ್ಲಾನಿಂಗ್ ಗ್ರಾಮ ಎನಿಸಿದೆ, ಇದೇ ರೀತಿ ಇತರೆ ಗ್ರಾಮಗಳು ಬಸರಾಳು ಹೋಬಳಿಯಲ್ಲಿ ನಿರ್ಮಾಣವಾಗಬೇಕಿವೆ ಎಂದರು.
ಬಸರಾಳು ಹೋಬಳಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಯಾವ ಹಳ್ಳಿಗೂ ರಸ್ತೆ ಇಲ್ಲ, ಯಾವ ರಸ್ತೆಗೂ ಡಾಂಬರೀಕರಣವಿಲ್ಲ, ಯಾವ ಹಳ್ಳಿಗೂ ನೀರಿಲ್ಲ, ಆದ್ದರಿಂದ ಮಾರಗೌಡನಹಳ್ಳಿಯಂತೆ ಎಲ್ಲಾ ಗ್ರಾಮಗಳು ಆಗಬೇಕಿದೆ. ಆದ್ದರಿಂದ ಈ ಗ್ರಾಮವನ್ನು ಆಯ್ಕೆಯಾಡಿಕೊಂಡು ಇಲ್ಲಿಂದಲೇ ಮತ ಪ್ರಚಾರ ಮಾಡುತ್ತಿದ್ದೇವೆ ಎಂದು ನುಡಿದರು.
ಮಾಜಿ ಸಚಿವ ಎಸ್.ಡಿ.ಜಯರಾಂ ಅವರ ಪುತ್ರಿ ಅನುರಾಧ ಪರಮೇಶ್ ಮಾತನಾಡಿ, ಮಾರಗೌಡನಹಳ್ಳಿಯಲ್ಲಿ ಬಿಜೆಪಿ ಪರ ಮತಯಾಚಿಸುತ್ತಿದ್ದೇವೆ, ಅಶೋಕಜಯರಾಂ ಅವರನ್ನು ಗೆಲ್ಲಿಸಿಕೊಡಿ, ಅಭಿವೃದ್ದಿಯ ಪರ್ವ ಆರಂಭಗೊಳ್ಳಲಿದೆ ಎಂದು ಮತದಾರರಲ್ಲಿ ಮನವಿ ಮಾಡಿದರು.
2023ರ ಮಂಡ್ಯ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ, ಸ್ಥಳೀಯ ಗ್ರಾಮಗಳ ಅಭಿವೃದ್ದಿಗೆ ಹೊಸ ನಾಯಕನ್ನು ಸೃಷ್ಠಿಸಿ, ನಿಮ್ಮಗಳ ಸೇವೆ ಮಾಡಿದ ಮಾಜಿ ಸಚಿವರಾದ ಎಸ್.ಡಿ.ಜಯರಾಂ ಅವರ ಮಗ ಅಶೋಕ್ಜಯರಾಂ ಅವರು ವಿಜಯಶಾಲಿಯಾಗಲು ಆಶೀರ್ವಾದ ಮಾಡಿ ಎಂದು ಕೋರಿಸಿದರು.
ಇದೇ ಸಂಧರ್ಭದಲ್ಲಿ ಗ್ರಾಮದಲ್ಲಿರುವ ಎಸ್.ಡಿ.ಜಯರಾಂ ಒಡನಾಡಿಗಳ ಮುಖಂಡರ ಮನೆಗಳಿಗೆ ಡಾ.ಪರಮೇಶ್ ಮತ್ತು ನಗರಸಭೆ ಮಾಜಿ ಸದಸ್ಯ ಕಲ್ಲಹಳ್ಳಿ ನಾಗೇಂದ್ರ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ, ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಮಹೇಶ್, ಕೆರಗೋಡು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮಶೇಖರ್, ವಿಎಸ್ಎಸ್ಬಿಎಂ ಅಧ್ಯಕ್ಷ ವರದರಾಜು, ಗ್ರಾ.ಪಂ.ಮಾಜಿ ಸದಸ್ಯೆ ಮಂಗಳಮ್ಮ, ಸುಕನ್ಯ, ಕಾಂತರಾಜ್ ಮತ್ತಿತರರಿದ್ದರು.




