Thursday, November 19, 2026

ಪ್ರಾಯೋಗಿಕ ಆವೃತ್ತಿ

ಪ್ರಾಕೃತಿಕ ಶಕ್ತಿಗಳ ಆರಾಧನೆಯಿಂದ ಜಾನಪದ ಕಲೆಗಳ ಹುಟ್ಟು : ಡಾ.ಕೆಂಪಮ್ಮ

ಜನಪದ ಕಲೆ ಮತ್ತು ಸಾಹಿತ್ಯ, ಮನುಷ್ಯನಷ್ಠೆ ಪ್ರಾಚೀನವಾದದ್ದು, ಪ್ರಾಕೃತಿಕ ಶಕ್ತಿಗಳನ್ನು ಆರಾಧಿಸುವುದರೊಂದಿಗೆ ಜಾನಪದ ಕಲೆಗಳು ಹುಟ್ಟಿಕೊಂಡವು ಎಂದು ಜಾನಪದ ತಜ್ಞೆ ಡಾ.ಕೆಂಪಮ್ಮ ಹೇಳಿದರು.

ಮಂಡ್ಯನಗರದ ಗಾಂಧಿಭವನದಲ್ಲಿ ಜಾನಪದ ಕಲಾವಿದರ ಒಕ್ಕೂಟ ಮೈಸೂರು ವಿಭಾಗ ಆಯೋಜಿಸಿದ್ದ ಜಾನಪದ ಕಲಾಪ್ರದರ್ಶನ ಮತ್ತು ‘ಜನಪದ ಕಲೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆದಿಮಾನವ ಪ್ರಕೃತಿಯಲ್ಲಿ ಉಂಟಾಗುವ ಮಿಂಚು, ಗುಡುಗು, ಸಿಡಿಲು ಇತರೆ ವಿಕೋಪಗಳ ಭಯ ನಿವಾರಣೆಗಾಗಿ ಭಕ್ತಿಯಿಂದ ಆರಾಧಿಸುವ ಅತೀವ ಶಕ್ತಿಯನ್ನು ಒಲಿಸಿಕೊಳ್ಳಲಿಕ್ಕಾಗಿ ರೂಪಗೊಂಡ ಸುಸಂಸ್ಕಾರವೇ ಜಾನಪದ ಕಲೆಗಳಾಗಿ ವಿಸ್ತಾರಗೊಂಡವು, ಕುಣಿತ, ಹಾಡುಗಳನ್ನು ಕಟ್ಟಿ ಬೆಳೆಸಿಕೊಂಡು ಬಂದರು. ಒಂದು ಪ್ರದೇಶದ ಜಾನಪದ ಕಲೆ ಮತ್ತು ಕಲಾವಿದರು ನಾಡಿನ ಸಂಪತ್ತು ಎಂದು ಹೇಳಲಾಗಿದೆ, ಪ್ರದೇಶದ ಔನತ್ಯ ಮತ್ತು ಉನ್ನತಿಯನ್ನು ಗುರುತಿಸಲು ಸಾಂಸ್ಕೃತಿಕ ಶ್ರೀಮಂತಿಯನ್ನು ಪರಿಣಿಸಲಾಗುತ್ತದೆ ಎಂದು ನುಡಿದರು.

ರಾಜ್ಯದಲ್ಲಿ ಒಂದುವರೆ ಸಾವಿರಕ್ಕೂ ಹೆಚ್ಚು ಜಾನಪದ ಕಲೆಗಳನ್ನು ವಿದ್ವಾಂಸರು ಮತ್ತು ತಜ್ಞರು ಗುರುತಿಸಿದ್ದಾರೆ, ಒಂದೊಂದು ಪ್ರದೇಶಕ್ಕೂ ಆಯಾಯ ಜಾನಪದ ಕಲೆಗಳು, ಸಾಂಸ್ಕೃತಿಕ ನೆಲೆಗಳ ಮಹತ್ವವಿರುತ್ತದೆ,  ಮಂಡ್ಯ ಜಿಲ್ಲೆಯು ಕೂಡ ಜಾನಪದ ಕಣಜವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ ಚಾಮಲಾಪುರ ಉದ್ಘಾಟಿಸಿದರು. ಬಳಿಕ ಜಾನಪದ ಕಲಾಪ್ರದರ್ಶನ ನಡೆಯಿತು. ಗಣ್ಯರು ಕೃತಿಗಳನ್ನು ಲೋಕಾರ್ಪಾಣೆಗೊಳಿಸಿದರು.

ವೇದಿಕೆಯಲ್ಲಿ ರಂಗಭೂಮಿ ಕಲಾವಿದ ಸಂಪಳ್ಳಿ ಬಸವರಾಜ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ‘ಜನಪದ ಕಲೆಗಳು’ ಕೃತಿಕಾರ ಆರ್.ಕೆ.ಸ್ವಾಮಿ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ