ಕಳೆದ ತಿಂಗಳು ಮಾರ್ಚ್ 11 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನರಾಗಿದ್ದರು. ಇದು ಇಡೀ ಕುಟುಂಬಕ್ಕೆ ಆಘಾತವುಂಟು ಮಾಡಿತ್ತು.
ನಂತರ ಆರ್.ಧ್ರುವನಾರಾಯಣ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಖುಷಿಯಲ್ಲಿದ್ದ ಕುಟುಂಬಕ್ಕೆ ಈಗ ಮೊತ್ತೊಂದು ಆಘಾತವುಂಟಾಗಿದೆ.
ಪತಿ ದಿವಂಗತ ಆರ್.ಧ್ರುವನಾರಾಯಣ ನಿಧನರಾಗಿ ಒಂದು ತಿಂಗಳು ಕಳೆಯುವದರ ಒಳಗಾಗಿ ಪತ್ನಿ ವೀಣಾ ಧ್ರುವನಾರಾಯಣ್ ಸಾವನ್ನಪ್ಪಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಅವರನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಇಂದು (ಏ.7) ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ತಂದೆಯ ಅಕಾಲಿಕ ಮರಣದಿಂದ ಕಂಗೆಟ್ಟಿದ್ದ ಧ್ರುವ ನಾರಾಯಣ್ ಅವರ ಮಕ್ಕಳಾದ ದರ್ಶನ್ ಮತ್ತು ಧೀರನ್ ಅವರಿಗೂ ಇದೀಗ ತಾಯಿಯ ಸಾವು ಸಿಡಿಲು ಬಡಿದಂತಾಗಿದೆ. ತಂದೆಯ ಸಾವಿನ ನಂತರ ಸ್ವಲ್ಪ ಚೇತರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ದರ್ಶನ್ ಈಗ ಸೋತು ಹೋಗಿದ್ದಾರೆ.
ತಾಯಿ ನಿಧನದ ಸುದ್ದಿ ತಿಳಿದು ಇಂದು ತಮ್ಮ ಎಲ್ಲಾ ರಾಜಕೀಯ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ದರ್ಶನ್ ಮನೆ ತಲುಪಿದ್ದಾರೆ.




