Sunday, May 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು ಅಪ್ಪುಗೌಡನ ಕೊಲೆಗೆ ಸುಪಾರಿ ಕೊಟ್ಟ ಮಧು ಯಾರು?

ಮದ್ದೂರು ಜೆಡಿಎಸ್ ಮುಖಂಡ ಅಪ್ಪು ಪಿ.ಗೌಡನ ಕೊಲೆಗೆ ಆತನ ಸ್ನೇಹಿತ ಕೋಣಸಾಲೆ ಮಧು ಸುಪಾರಿ ಕೊಟ್ಟ ಸುದ್ದಿ ಕೇಳಿ ಮದ್ದೂರಿನ ಜನರು ಶಾಕ್ ಆಗಿದ್ದಾರೆ.

ಅಪ್ಪು ಪಿ.ಗೌಡ ಹಾಗೂ ಕೋಣಸಾಲೆ ಮಧು ಕಳೆದ 10-15 ವರ್ಷಗಳಿಂದ ಸ್ನೇಹಿತರಾಗಿದ್ದು, ಇಬ್ಬರೂ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರಗಳಲ್ಲಿ ಪಾಟ್ನರ್ ಗಳಾಗಿದ್ದರು. ಮದ್ದೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಇವರಿಬ್ಬರು ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಪರಾಭವಗೊಂಡಿದ್ದ ಫೈಟರ್ ರವಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಇವರಿಬ್ಬರು ಒಂದು ಕಾಲದಲ್ಲಿ ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರದಲ್ಲೂ ಭಾಗಿಯಾಗಿದ್ದರು ಎಂದು ಮದ್ದೂರಿನ ಜನರೇ ಹೇಳುತ್ತಾರೆ. ಎಲ್ಲಾ ವ್ಯವಹಾರಗಳಲ್ಲಿಯೂ ಜೊತೆಯಾಗಿಯೇ ವ್ಯವಹರಿಸುತ್ತಿದ್ದ ಇವರಿಬ್ಬರ ಮಧ್ಯೆ ಇತ್ತೀಚಿನ ದಿನಗಳಲ್ಲಿ ವೈಮನಸ್ಯ ಶುರುವಾಗಿತ್ತು.

ಮದ್ದೂರಿನ ಐಶ್ವರ್ಯ ಕಾಲೇಜು ಮುಂದೆ ಇದ್ದ ಜಾಗ ದೇವಿಕ ಎಂಬವರಿಗೆ ಸೇರಿದ್ದು, ಈ ಜಾಗವನ್ನು ಅಪ್ಪು ಗೌಡ ಕೋಣಸಾಲೆ ಮಧು ಅವರ ಹೆಸರಿಗೆ ಮಾಡಿಸಿದ್ದ. ಈ ಜಾಗದ ವಿಷಯ ಕೋರ್ಟ್ ಮೆಟ್ಟಿಲೇರಿ ಕೊನೆಗೆ ಅದು ಮಧು ಪಾಲಾಗಿತ್ತು. ಇದಾದ ನಂತರ ಇವರಿಬ್ಬರ ನಡುವೆ ವೈಮನಸ್ಯ ಮೂಡಿ ಇಬ್ಬರೂ ವ್ಯವಹಾರಿಕವಾಗಿ ಬೇರೆ ಬೇರೆಯಾದರು.

ಈ ಮಧ್ಯೆ ಅಪ್ಪುಗೌಡ ಕೋಣಸಾಲೆ ಮಧು ಪತ್ನಿ ಹಾಗೂ ಆಕೆಯ ತಾಯಿಯ ಮೇಲೆ ನ್ಯಾಯಾಲಯದಲ್ಲಿ ಚೆಕ್ ಕೇಸು ಹಾಕಿದ್ದ. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಕೋಣಸಾಲೆ ಮಧು ಬೆಂಗಳೂರಿನ ರೌಡಿ ಜಗದೀಶನನ್ನು ಸಂಪರ್ಕಿಸಿ ಸುಪಾರಿ ನೀಡಿ ಪೊಲೀಸರಿಗೆ ತಗಲಾಕಿ ಕೊಂಡಿದ್ದಾನೆ.

ಮದ್ದೂರಿನಲ್ಲಿ ಕಳೆದ 10-15 ವರ್ಷಗಳಿಂದ ರೌಡಿಸಂ, ರಾಜಕೀಯ ಎಂದೆಲ್ಲಾ ಗುರುತಿಸಿಕೊಂಡಿದ್ದ ಅಪ್ಪುಗೌಡ ಮೇಲೆ ರಾಬರಿ ಕೇಸ್ ಸೇರಿದಂತೆ ಹಲವು ಕೇಸ್ ಗಳಿದ್ದು ಈತನ ಮೇಲೆ ರೌಡಿ ಶೀಟ್ ತೆರೆಯಲಾಗಿತ್ತು. ಇತ್ತೀಚೆಗೆ ರೌಡಿ ಶೀಟರ್ ಪಟ್ಟಿಯಿಂದ ಈತನ ಹೆಸರು ಕೈ ಬಿಡಲಾಗಿದೆ ಎಂಬ ಮಾಹಿತಿಯೂ ಇದೆ.ಕಳೆದ ಐದಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅಪ್ಪುಗೌಡ ಮದ್ದೂರು ರಾಜಕೀಯದಲ್ಲಿ ಸಕ್ರಿಯವಾಗಿದ್ದ.

ಜಾಹೀರಾತು

ಕೆಸ್ತೂರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ. ಈತನ ಪತ್ನಿ ಪ್ರಿಯಾಂಕ ಗೌಡ ಮದ್ದೂರು ಪುರಸಭೆ ಸದಸ್ಯೆಯಾಗಿ ಮಾಡಿದ್ದ. ಕೊರೊನಾ ರೋಗದಿಂದ ಮದ್ದೂರು ತಾಲ್ಲೂಕಿನ ಹಲವು ಜನರು ಸಾವಿಗೀಡಾದ ಸಂದರ್ಭದಲ್ಲಿ ಅವರ ಕುಟುಂಬದವರೇ ಅಂತ್ಯ ಸಂಸ್ಕಾರ ಮಾಡಲು ಹೆದರುತ್ತಿದ್ದರು. ಈ ಸಂದರ್ಭದಲ್ಲಿ ಅಪ್ಪುಗೌಡ ಹಾಗೂ ಪ್ರಿಯಾಂಕಗೌಡ ಇಬ್ಬರೂ ತಮ್ಮ ಟ್ರಸ್ಟ್ ಮೂಲಕ ಪಿಪಿಇ ಕಿಟ್ ಹಾಕಿಕೊಂಡು ಶವ ಸಂಸ್ಕಾರ ಮಾಡುವ ಮೂಲಕ ಜನರ ಮಧ್ಯೆ ಮೆಚ್ಚುಗೆ ಗಳಿಸಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪತಿ-ಪತ್ನಿ ಇಬ್ಬರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗುರು ಚರಣ್ ಅವರಿಗೆ ಸಿಗದ ಕಾರಣ ಅವರೊಂದಿಗೆ ಕಾಂಗ್ರೆಸ್ ತ್ಯಜಿಸಿ, ಜೆಡಿಎಸ್ ಸೇರಿದ್ದರು. ಮದ್ದೂರಿನ ಡಾ. ರಾಮಕೃಷ್ಣೇ ಗೌಡ ಎಂಬ ವೈದ್ಯರ ಜಾಗವನ್ನು ಜಿಪಿಎ ಮಾಡಿಸಿಕೊಂಡು ನಂತರ ಪುರಸಭೆ ಸಿಬ್ಬಂದಿಗಳ ಮೂಲಕ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡ ಅಪ್ಪಗೌಡನ ಬಗ್ಗೆ ಪುರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ‌.

ಹೀಗಿರುವಾಗ ಅಪ್ಪು ಗೌಡನ ಮೇಲೆ ಇಂದು ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಈತನ ಸ್ನೇಹಿತ ಕೋಣಸಾಲೆ ಮಧು ನೀಡಿದ್ದ ಸುಪಾರಿ ಹಂತಕರಿಂದ ಮಾರಣಾಂತಿಕ ದಾಳಿ ನಡೆದು,ದೇವಸ್ಥಾನಕ್ಕೆ ಬಂದಿದ್ದ ಜನರು ದುಷ್ಕರ್ಮಿಗಳನ್ನು ಓಡಿಸಿಕೊಂಡು ಹೋಗಿದ್ದರಿಂದ ಸ್ವಲ್ಪದರದಲ್ಲೇ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!