✍️ ಎಂ.ವಿ. ಕೃಷ್ಣ, ನಿವೃತ್ತ ಪ್ರಾಂಶುಪಾಲರು
ಡಾ.ರಾಜಕುಮಾರ್ ರವರು ಅಭಿಮಾನಿಗಳನ್ನು ದೇವರು ಎಂದು ಕರೆದರು. ತಮ್ಮ ಸಿನೆಮಾಗಳಲ್ಲಿ ಮಧ್ಯಪಾನ,ಧೂಮಪಾನ ಮಾಡುವುದನ್ನು ಒಪ್ಪುತ್ತಿರಲಿಲ್ಲವಂತೆ. ಯಾಕೆಂದರೆ ಅಭಿಮಾನಿ ದೇವರುಗಳನ್ನು ದುಶ್ಚಟಗಳಿಗೆ ತಾನೇ ಪ್ರೋತ್ಸಾಹ ಮಾಡಿದಂತಾಗುತ್ತದೆ ಎಂದು.
ಆದರೆ ನಮ್ಮ ಇಂದಿನ ನಟರು ಜೂಜಾಟದ ಜಾಹೀರಾತಿನಲ್ಲಿ ಭಾಗವಹಿಸಿ ಯುವಕರನ್ನು ಜೂಜಾಡಲು ಪ್ರೇರಣೆ ಮಾಡುತಿದ್ದಾರೆ.
ಇದೂ ಸಾಲದು ಎಂದು ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡುತಿದ್ದಾರೆ. ಇದು ಸಹ ಪ್ರಭಾವ ಬೀರುತ್ತದೆ ಎಂಬ ಸಾಮಾನ್ಯ ಅರಿವು ಇಲ್ಲದವರು. ಆದ್ದರಿಂದಲೇ ರಾಜಕುಮಾರ್ ಅಭಿಜಾತ ಕಲಾವಿದರು ಮತ್ತು ಮಾದರಿ ವ್ಯಕ್ತಿ.
ಇಂದಿನವರು ಕೇವಲ ನಟರು.




