Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾದ್ಯಂತ ಇಂದು ನಾಮಪತ್ರ ಸಲ್ಲಿಸಿದವರು ಎಷ್ಟು ಮಂದಿ ಗೊತ್ತಾ ?

ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ರ ಮಂಡ್ಯ ಜಿಲ್ಲಾ ವ್ಯಾಪ್ತಿಯ 7 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮವಾರ (ಏ.17) ದಂದು 21 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ.

ಅಭ್ಯರ್ಥಿಗಳ ವಿವರ : 

ಮಳವಳ್ಳಿ ವಿಧಾನಸಭೆ
ಸತೀಶ್‌ಕುಮಾರ್ ಟಿ.ಎನ್ ಪಕ್ಷೇತರ (1 ನಾಮಪತ್ರ), ನಂದೀಶ್ ಕುಮಾರ್ ಎಂ- ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (1ನಾಮಪತ್ರ), ಅನ್ನದಾನಿ ಸಿ –  ಪಕ್ಷೇತರ (1),

ಮದ್ದೂರು ವಿಧಾನಸಭೆ
ಚಿಕ್ಕನಂಜಾಚಾರಿ ಪಕ್ಷೇತರ (1), ಉದಯ ಕೆ.ಎಂ- ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (1), ಎಸ್ ಪಿ ಸ್ವಾಮಿ – ಭಾರತೀಯ ಜನತಾ ಪಕ್ಷ (2), ಕೆ. ಜೆ ಮಹೇಶ- ಕರ್ನಾಟಕ ರಾಷ್ಟ್ರ ಸಮಿತಿ (1)

ಮೇಲುಕೋಟೆ ವಿಧಾನಸಭೆ
ಎನ್. ಎಸ್ ಇಂದ್ರೇಶ್ – ಭಾರತೀಯ ಜನತಾ ಪಕ್ಷ (1), ಲೋಕೇಶ್ ಎಸ್ – ಉತ್ತಮ ಪ್ರಜಾಕೀಯ ಪಕ್ಷ (1),

ಮಂಡ್ಯ ವಿಧಾನಸಭೆ  
ಎಸ್. ಜೆ ಅಶೋಕ್ – ಬಿಜೆಪಿ ಭಾರತೀಯ ಜನತಾ ಪಕ್ಷ (1)

ಶ್ರೀರಂಗಪಟ್ಟಣ ವಿಧಾನಸಭೆ  
ಎಂ ಎಂ ಮಹೇಶ ಗೌಡ – ಪಕ್ಷೇತರ (1), ಎಸ್ ಸಚ್ಚಿದಾನಂದ – ಭಾರತೀಯ ಜನತಾ ಪಕ್ಷ (1), ಪಿ ಹೆಚ್ ಚಂದ್ರಶೇಖರ್ – ಪಕ್ಷೇತರ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (2), ಎ ಬಿ ರಮೇಶ – ಭಾರತೀಯ ರಾಷ್ಟೀಯ ಕಾಂಗ್ರೆಸ್ (4)

ನಾಗಮಂಗಲ ವಿಧಾನಸಭೆ
ಕೆ ಎಂ ಲೋಹಿತ್ – ಪಕ್ಷೇತರ (1), ಸುರೇಶ್ ಗೌಡ – ಜನತಾದಳ (ಜಾತ್ಯಾತೀತ) (1), ಎನ್ ಚಲುವರಾಯಸ್ವಾಮಿ – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (3), ಮುಜ್ ಮಿಲ್ ಪಾಷ – ಪಕ್ಷೇತರ (1), ಸುಧಾ ಶಿವರಾಮೇಗೌಡ – ಭಾರತೀಯ ಜನತಾ ಪಕ್ಷ (1)

ಕೆ.ಆರ್ ಪೇಟೆ ವಿಧಾನಸಭೆ 
ನಾರಾಯಣಗೌಡ – ಭಾರತೀಯ ಜನತಾ ಪಕ್ಷ (1), ಚಂದನ್‌ಗೌಡ ಕೆ – ಪಕ್ಷೇತರ (1)

ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ಏಪ್ರಿಲ್ 21 ರಂದು ನಡೆಯಲಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನಾಂಕವಾಗಿದ್ದು ಮತದಾನವು ಮೇ 10 ರಂದು ನಡೆಯಲಿದ್ದು, ಮತ ಎಣಿಕೆಯು ಮೇ 13 ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಹೆಚ್ .ಎನ್ ಗೋಪಾಲಕೃಷ್ಣ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ