Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಚಲುವರಾಯಸ್ವಾಮಿಗೆ ಉಸ್ತುವಾರಿ ಬಗ್ಗೆ ತಿಳಿದಿಲ್ಲ: ಪುಟ್ಟರಾಜು ತಿರುಗೇಟು

ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿ ಎನಿಸಿಕೊಂಡಿರುವ ಚಲುವರಾಯಸ್ವಾಮಿ ಬಹುಶಃ ತನ್ನನ್ನು ಮೇಲುಕೋಟೆ ಚಲುವ ನಾರಾಯಣಸ್ವಾಮಿ ಅಂದುಕೊಂಡಿರಬೇಕು. ಬರೀ ಕೂಗಾಡುವುದರಲ್ಲಿ ಮಾಧ್ಯಮಗಳ ಮೇಲೆ ಮುಖಂಡರುಗಳ ಮೇಲೆ ಎಗರಾಡುವುದನ್ನ ಬಿಟ್ಟರೆ, ಜಿಲ್ಲಾ ಉಸ್ತುವಾರಿ ಇವರಿಗೆ, ತಿಳಿದೇ ಇಲ್ಲ ಎನ್ನಿಸುತ್ತದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಸಮಸ್ಯೆ, ಕಾವೇರಿ ಸಮಸ್ಯೆ ಬಂದಾಗ ಧ್ವನಿ ಎತ್ತುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಈಗಾಗಲೇ ಕೆ.ಆ‌ರ್.ಎಸ್ ಡ್ಯಾಂನಲ್ಲಿ ನೀರು ಇದ್ದರೂ ರೈತರಿಗೆ ನೀರು ಕೊಡದೇ ರಾಜಕಾರಣ ಮಾಡಿದ್ದೀರಿ. ಈಗ ಮಳೆ ಆರಂಭವಾಗಿದೆ. ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ಎಚ್ಚರಿಕೆ ಇರಲಿ. ರೈತರ ಬದುಕಿನ ಬಗ್ಗೆ ಗಮನವಿರಲಿ ಎಂದರೆ ಬಾಯಿಗೆ ಬಂದಂತೆ ಹರಟುತ್ತೀರಿ. ಜಿಲ್ಲೆಗೆ ನೀವು ಮಾಡಿರುವ ಅನ್ಯಾಯದಲ್ಲಿ ಜನ ನಿಮ್ಮನ್ನು ಓಡಾಡಲು ಬಿಟ್ಟಿರುವುದೇ ಹೆಚ್ಚು ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಏನೆಂದ್ರೀ ಮಂತ್ರಿಗಳೇ “ಅವನ್ಯಾರೀ ಪುಟ್ಟರಾಜು” ಸ್ವಲ್ಪ ಹಿಂದಿರುಗಿ ನೋಡಪ್ಪಾ ನೀವು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಆಗುವಾಗಲಿಂದಲೂ ನಿಮ್ಮನ್ನ ಉಪಾಧ್ಯಕ್ಷನ್ನಾಗಿ ಮಾಡುವಾಗಲೂ ಇದ್ದವನು. ನಿನ್ನ ತರಹ ನಾನು 3 ಸಲ ಎಂ.ಎಲ್.ಎ, ಎಂ.ಪಿ, ಜಿಲ್ಲಾ ಉಸ್ತುವಾರಿ ಎಲ್ಲಾ ನೋಡಿದ್ದೀನಿ, ನಾನು ಬಿಸಿನೆಸ್ ಮ್ಯಾನ್. ಕಷ್ಟಪಟ್ಟು ದುಡಿದು ಜನಸೇವೆ ಮಾಡುತ್ತಿದ್ದೇನೆ. ‘ರಾಜಕಾರಣ ಮಾಡಲು ರಾಜಕಾರಣಿ ನೀನು’. ಜನ ಸೇವೆ ಮಾಡಲು ರಾಜಕಾರಣಿ ನಾನು ಎಂದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿರವರು ಮಂತ್ರಿಯಾಗಿ ಕೇವಲ 1 ತಿಂಗಳು ಆಗಿದೆ. ಅವರಿಗೆ ಗೊತ್ತಿದೆ ಜಿಲ್ಲೆಯ ಸಮಸ್ಯೆ ಏನು, ರೈತರ ಸಮಸ್ಯೆ ಏನು ಅಂತ. ಅವರ ಕೆಲಸ ಅವರು ಮಾಡುತ್ತಾರೆ. ‘ತಾಕತ್ತು ಇದ್ದರೆ ಬಾ’ ಅವರೇನು ದೇವರೇ ‘ಗಂಡಸೇ ಇಲ್ವಾ’ ಅಂದೋರಿಗೆಲ್ಲಾ ಜಿಲ್ಲೆಯ ಪ್ರಜ್ಞಾನವಂತ ಜನರೇ ಬುದ್ಧಿ ಕಲಿಸಿದ್ದಾರೆ. ಋಣ ತೀರಿಸುವುದು ಗೊತ್ತಿದೆ. ಇನ್ನಾದರೂ ಸ್ವಲ್ಪ ಜಿಲ್ಲೆಯ ಸಮಸ್ಯೆಗಳ ಮಧ್ಯೆ ನಿಂತು ಮಾತಾಡಿ ಬೇರೆ ನಾಯಕರುಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ಗೌರವವಿರಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ