Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ಅವರ ಆಸ್ತಿ ವಿವರ

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ಅವರು ತಮ್ಮ ಬಳಿ 11.24 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಇದರಲ್ಲಿ ಅನ್ನದಾನಿ ಬಳಿ 70.22ಲಕ್ಷ ರೂ. ಪತ್ನಿ ವಿ.ರುಕ್ಮಿಣಿ ಬಳಿ 1.21 ಕೋಟಿ ರೂ ಹಾಗೂ ಪುತ್ರ ಅಂಶು ಅನ್ನದಾನಿ ಬಳಿ 1.68 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.

ಡಾ.ಕೆ.ಅನ್ನದಾನಿ 2.08 ಕೋಟಿ ಹಾಗೂ ಪತ್ನಿ ರುಕ್ಮಿಣಿ 27 ಲಕ್ಷ ರೂ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಅನ್ನದಾನಿ ಬಳಿ 7.05ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನ, 77,500 ರೂ. ಮೌಲ್ಯದ 1 ಕೆಜಿ ಬೆಳ್ಳಿ ಇದ್ದರೆ, ಪತ್ನಿ ಬಳಿ 50.36ಲಕ್ಷ ರೂ. ಮೌಲ್ಯದ 857ಗ್ರಾಂ ಚಿನ್ನ, 4.65ಲಕ್ಷ ರೂ.ಮೌಲ್ಯದ 6 ಕೆಜಿ ಬೆಳ್ಳಿ ಇದೆ.

ಅನ್ನದಾನಿ ಬಳಿ ಇನ್ನೋವಾ ಕಾರು, ದ್ವಿಚಕ್ರ ವಾಹನಗಳಿವೆ. ಅನ್ನದಾನಿ ಹೆಸರಿನಲ್ಲಿ 2.08 ಕೋಟಿ ರೂ. ಸಾಲವಿದ್ದರೆ, ಪತ್ನಿ ಹೆಸರಿನಲ್ಲಿ 27 ಲಕ್ಷ ರು. ಸಾಲವಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!