Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಚಿಕ್ಕಮಂಡ್ಯ ಸರ್ಕಾರಿ ಜಾಗದ ಒತ್ತುವರಿ ತೆರವಿಗೆ ಮೀನಾಮೇಷ

ಮಂಡ್ಯ ನಗರಕ್ಕೆ ಹೊಂದಿಕೊಂಡಿರುವ ಮಂಡ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿ ಇರುವ ಸರ್ವೆ ನಂ 1000 ರ 9 ಗುಂಟೆ ಸರ್ಕಾರಿ ಜಮೀನನ್ನು ನಾಲ್ವರು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಈ ಜಾಗವನ್ನು ತೆರವು ಮಾಡಿಸಲು ಮಂಡ್ಯ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂಬ ದೂರು ಕೇಳಿ ಬಂದಿದೆ.

ಜಾಗ ಒತ್ತುವರಿ ಮಾಡಿರುವ ಚಿಕ್ಕಮಂಡ್ಯ ಗ್ರಾಮದ ದೊರೆಸ್ವಾಮಿ ಬಿನ್ ಲೇ. ರಾಮಯ್ಯ, ಕುಮಾರ ಬಿನ್ ಲೇ ರಾಮಯ್ಯ, ದೇವರಾಜು ಬಿನ್ ಲೇ. ಪಂತಲಕ್ಕಿ ಶಿವಲಿಂಗೇಗೌಡ ಹಾಗೂ ಬೋರೇಗೌಡ ಬಿನ್ ಲೇ. ಮೋಟಿ ಜವರಾಯಿ ಬೋರಯ್ಯ ಇವರಿಗೆ ಕಳೆದ ಅಕ್ಟೋಬರ್ 6ರಂದು ಮಂಡ್ಯ ತಹಶೀಲ್ದಾರ್ ಅವರು ನೋಟೀಸ್ ಜಾರಿ ಮಾಡಿದ್ದು, 7 ದಿನಗಳೊಳಗಾಗಿ ಜಾಗ ತೆರವು ಮಾಡುವಂತೆ ಸೂಚಿಸಿದ್ದರು. ಆದರೆ ಇದುವರೆಗೆ ಅವರು ಜಾಗ ತೆರವು ಮಾಡಿಲ್ಲ, ಮಂಡ್ಯ ತಾಲ್ಲೂಕು ಆಡಳಿತವು ಸಹ ತೆರವು ಮಾಡಿಸಿಲ್ಲ ಆದ್ದರಿಂದ ಈ ಬಗ್ಗೆ ಗಮನಹರಿಸಬೇಕಿದೆ.

ಒತ್ತುವರಿದಾರರಿಗೆ ತಹಶೀಲ್ದಾರ್ ನೋಟೀಸ್ ನೀಡಿರುವುದು

ಈ ಜಾಗವನ್ನು ಶಾಲೆಗೆ ಉಳಿಸಿಕೊಳ್ಳಲು ಅಲ್ಲಿನ ಶಿಕ್ಷಕರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಪ್ರಯತ್ನಕ್ಕೆ ಶಿಕ್ಷಣ ಇಲಾಖೆಯ ಬೆಂಬಲ ಇಲ್ಲವಾಗಿದೆ. ಈ ವಿಚಾರದಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಕನ್ನಡಪರ ಸಂಘಟನೆಗಳು ಅವರ ಬೆನ್ನಿಗೆ ನಿಲ್ಲಬೇಕಿದೆ. ಈ ಪ್ರಕರಣ ಮಂಡ್ಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಈ ವಿಚಾರ ಜಿಲ್ಲಾಧಿಕಾರಿಗಳು, ತಹಶೀಲ್ದಾರ ಗಮನದಲ್ಲಿದ್ದರು. ಅಧಿಕಾರಿಗಳು ಕೆಲ ಒತ್ತುವರಿದಾರರ ಹಿತಾಸಕ್ತಿಗೆ ಮಣಿದಿದ್ದಾರೆಂಬ ಆರೋಪ ಕೇಳಿ ಬಂದಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ