Thursday, November 19, 2026

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ”ಶಕ್ತಿ ಪ್ರದರ್ಶನ” ; ಹರಿದು ಬಂದ ಜನಸಾಗರ

ಪಾಂಡವಪುರ ಪಟ್ಟಣದಲ್ಲಿ ಎಲ್ಲೆಲ್ಲೂ ರೈತಸಂಘದ ಹಸಿರು ಶಾಲುಗಳ ಮೆರವಣಿಗೆ.. ಪಟ್ಟಣದ ತುಂಬೆಲ್ಲ ಅಪಾರ ಪ್ರಮಾಣದಲ್ಲಿ ತುಂಬಿ ತುಳುಕಿದ ಜನಸ್ತೋಮ… ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ…..ಹಾಗೂ ಚಿತ್ರನಟ ದರ್ಶನ್ ಅವರಿಗೆ ಜೈಕಾರ…ಮುಗಿಲು ಮುಟ್ಟಿದ ಘೋಷಣೆಗಳು….

ಇವು ಗುರುವಾರ ಪಾಂಡವಪುರ ಪಟ್ಟಣದಲ್ಲಿ ಕಂಡು ಬಂದ ದೃಶ್ಯಾವಳಿಗಳು. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಾದ್ಯಂತ ಅಪಾರವಾದ ಜನಸಾಗರವೇ ಹರಿದು ಬಂದಿತ್ತು. ಈ ಮೂಲಕ ದರ್ಶನ್ ಪುಟ್ಟಣ್ಣಯ್ಯ ಎದುರಾಳಿಗಳಿಗೆ ತಮ್ಮ ”ರೈತ ಶಕ್ತಿ ಪ್ರದರ್ಶನ” ಮಾಡಿದರು.

ಪಾಂಡವಪುರ ಪಟ್ಟಣದ ಕೆಎಸ್ಆರ್’ಟಿಸಿ ಡಿಪೋಯಿಂದ ಪ್ರಾರಂಭವಾದ ಮೆರವಣಿಗೆ ಬನ್ನರಿಯಮ್ಮನ ದೇವಾಲಯದವರೆಗೆ ನಡೆಯಿತು. ಮಧ್ಯಾಹ್ನ 2 ಗಂಟೆಗೆ ನಟ ದರ್ಶನ್ ಆಗಮಿಸುತ್ತಾರೆಂಬ ಮಾಹಿತಿ ಇದ್ದರೂ ಬೆಳಿಗ್ಗೆಯಿಂದಲೇ ಕ್ಷೇತ್ರದಾದ್ಯಂತ ಜನತೆ ಪಾಂಡವಪುರ ಪಟ್ಟಣದ ಕಡೆಗೆ ಹರಿದು ಬರಲು ಪ್ರಾರಂಭಿಸಿ, ಜಮಾವಣೆಗೊಂಡರು.

ಪಾಂಡವಪುರ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೇರಿ ಜನರು ಅಪಾರ ಪ್ರಮಾಣದ ಜನತೆಯ ಮೆರವಣಿಯನ್ನು ಕಣ್ತುಂಬಿಕೊಂಡರು.

ಪಟ್ಟಣದ ಐದು ದ್ವೀಪದ ವೃತ್ತದಲ್ಲಿ ನಟ ದರ್ಶನ್ ಜನಸಾಗರವನ್ನುದ್ದೇಶಿಸಿ ಮಾತನಾಡಿ, ದರ್ಶನ್ ಪುಟ್ಟಣ್ಣಯ್ಯ ಜನಪರವಾದ ಕಾಳಜಿ ಹೊಂದಿರುವ ಯುವ ನಾಯಕ. ಅವರ ಮಾತುಗಳನ್ನು ಕೇಳುತ್ತಿದ್ದರೆ ಸಂತೋಷವಾಗುತ್ತದೆ. ಅವರನ್ನು ಗೆಲ್ಲಿಸಿ ಕಳುಹಿಸಿಕೊಡಿ ಎಂದು ಮನವಿ ಮಾಡಿದರು. ನಂತರ ದರ್ಶನ್ ಪುಟ್ಟಣ್ಣಯ್ಯನವರ ಭಾಷಣವನ್ನು ಕೇಳಿ ಫಿದಾ ಆದರು. ನಂತರ ಚುನಾವಣಾಧಿಕಾರಿಗಳ ಕಚೇರಿ ತೆರಳಿ ದರ್ಶನ್ ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ