Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಸ್ಥಾನಗಳಲ್ಲೂ ಕಾಂಗ್ರೆಸ್ ಗೆಲ್ಲಿಸಿ : ಡಿ.ಕೆ.ಶಿವಕುಮಾರ್

2018ರಲ್ಲಿ ಕಾಂಗ್ರೆಸ್ ಪಕ್ಷವು ಬೆಂಬಲಿಸಿ ನೀಡಿದ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಪಕ್ಷವು ವಿಫಲವಾಗಿದೆ. ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷದ ದುರಾಡಳಿದಿಂದ  ರಾಜ್ಯದ ಜನತೆ ಬೇಸತ್ತಿದ್ದಾರೆ. ಇದರಿಂದ  ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆ.  ಇಂತಹ ಒಳ್ಳೆಯ ಸಮಯದಲ್ಲಿ ಮಂಡ್ಯ ಜಿಲ್ಲೆಯ ಜನತೆ ಈ ಭಾರಿ ಏಳಕ್ಕೆ ಏಳೂ ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮಾಜಿ ಸಚಿವರು ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಅವರು ಹೊಸಹೊಳಲು ಶ್ರೀ ಆಂಜನೇಯಸ್ವಾಮಿ ದೇವಾಲಯದಿಂದ ಕೆ.ಆರ್.ಪೇಟೆ ಪಟ್ಟಣದ ಶ್ರೀರಂಗ ಟಾಕೀಸ್ ಮಾರ್ಗವಾಗಿ, ಟಿಬಿ ಸರ್ಕಲ್, ದುರ್ಗಾಭವನ್ ಸರ್ಕಲ್ ಮೂಲಕ ತಾಲೂಕು ಕಚೇರಿಯವರೆಗೆ ನಡೆದ ಬೃಹತ್ ರೋಡ್ ಶೋ ಹಾಗೂ ಕಾಂಗ್ರೆಸ್ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ  ಟಿಎಪಿಸಿಎಂಎಸ್ ಸಮುದಾಯ ಭವನದ  ಆವರಣದಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರವಾಗಿ ಬಹಿರಂಗ ಮತ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನ ಸರಳ, ಸಜ್ಜನ ರಾಜಕಾರಣಿ ಬಿ.ಎಲ್.ದೇವರಾಜು ಅವರಿಂದ ಜೆಡಿಎಸ್ ಪಕ್ಷವು 43ವರ್ಷ ದುಡಿಸಿಕೊಂಡು ಮೋಸ ಮಾಡಿದೆ.  ಆದರೆ  ಕಾಂಗ್ರೆಸ್ ಪಕ್ಷವು ಕೈ ಹಿಡಿದು ದೇವರಾಜು ಅವರಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಕಾಂಗ್ರೆಸ್ ಪಕ್ಷದ ಸರ್ವೆ ನಡೆಯುತ್ತಿದ್ದ ಸಂದರ್ಭದಲ್ಲಿ ಅನುಕಂಪದ ಅಲೆ ಯಾರಿಗಿದೆ ಎಂಬ ಕಾಲಂನಲ್ಲಿ ಬಿ.ಎಲ್.ದೇವರಾಜು ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಗುರುತಿಸಿ ಟಿಕೆಟ್ ನೀಡಿದ್ದೇವೆ. ಇಂತಹ ಸರಳ, ಸಜ್ಜನರು, ದಕ್ಷ ಆಡಳಿತಗಾರರು ವಿಧಾನಸಭೆಗೆ ಕಳುಹಿಸಿದರೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಲಿದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅವರು ಪ್ರತಿನಿಧಿಸಿದ ಕ್ಷೇತ್ರವಾಗಿರುವ ಈ ಕ್ಷೇತ್ರದಲ್ಲಿ ಬಿ.ಎಲ್.ದೇವರಾಜು ಅವರನ್ನು ಗೆಲ್ಲಿಸುವ ಮೂಲಕ ರಾಜ್ಯಕ್ಕೆ ಒಂದು ಸಂದೇಶ ಕೊಡುವ ಸಂದರ್ಭ ಕ್ಷೇತ್ರದ ಜನತೆಗೆ ಬಂದಿದೆ ಎಂದರು.

ಕ್ಷೇತ್ರದಲ್ಲಿ ಕಳೆದ 10ವರ್ಷಗಳಿಂದ ಕಾಂಗ್ರೆಸ್  ಅಧಿಕಾರದಿಂದ ವಂಚಿತವಾಗಿದೆ. ಈದಿನ ಸುಮಾರು 20ಸಾವಿರಕ್ಕೂ ಹೆಚ್ಚು ಗಟ್ಟಿ ಕಾರ್ಯಕರ್ತರು ಭಾಗವಹಿಸಿ ಇಂದು ಶಕ್ತಿ ಪ್ರದರ್ಶನ ಮಾಡಿದ್ದೀರಿ. ಇದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಮುನ್ಸೂಚನೆಯಾಗಿದೆ.  ಹಾಗಾಗಿ ಕಾರ್ಯಕರ್ತರು ಇದೇ ಹುಮ್ಮಸ್ಸಿನಿಂದ ಮತದಾರರಿಗೆ ನಮ್ಮ ಪಕ್ಷದ ಗ್ಯಾರಂಟಿ ಕಾರ್ಡ್ ನೀಡಿ ಮತಯಾಚನೆ ಮಾಡಿದರೆ ಹೆಚ್ಚಿನ ಮತಗಳ ಅಂತದಿAದ ಗೆಲುವು ಸಾಧ್ಯವಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕ್ಷೇತ್ರದಲ್ಲಿ ಬಿ.ಎಲ್.ದೇವರಾಜು ಅಭ್ಯರ್ಥಿಯಲ್ಲ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಭ್ಯರ್ಥಿ ಎಂದು ತಿಳಿದು ಮತ ನೀಡಬೇಕು. ಮುಂದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷವು ಸರ್ಕಾರ ಬರೋದಿಲ್ಲ. ಆರು ಭಾರಿ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಲಕ್ಷö್ಮಣ್ ಸವದಿ,ಬಾಬುರಾವ್ ಚುಂಚನಸೂರು, ಆಯನೂರು ಮಂಜುನಾಥ್, ಗೋಪಾಲಕೃಷ್ಣ ಸೇರಿದಂತೆ ಹಲವಾರು ಬಿಜೆಪಿ ಪ್ರಮುಖರು ಬಿಜೆಪಿ ಪಕ್ಷದಲ್ಲಿ ಇದ್ದರೆ  ಭವಿಷ್ಯ ಇಲ್ಲ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ತಾಲ್ಲೂಕಿನಲ್ಲಿಯೂ ಮುಂದಿನ ದಿನಗಳಲ್ಲಿ ಬಿಜೆಪಿಯವರು ಕಾಂಗ್ರೆಸ್ ಬರುತ್ತಾರೆ.  ಬಿಜೆಪಿ ಯವರಿಗೆ ನನ್ನ ಆಹ್ವಾನ ಮುಕ್ತವಾಗಿದೆ. ಕಳೆದ ಭಾರಿ ಮಂಡ್ಯದಲ್ಲಿ ಏಳು ಜನ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದ್ರಿ, ನಾವೇ ಬೆಂಬಲ ನೀಡಿದ್ವಿ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಂಡ್ರಾ, ಸಿಎಂ ಆಗಿದ್ರೂ ಸಹ ತಮ್ಮ ಸುಪುತ್ರ ನಿಖಿಲ್‌ನ ಗೆಲ್ಲಿಸೋಕಾಗಲಿಲ್ಲ.  ಈಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜು ಅವರನ್ನು  ಗೆಲ್ಲಿಸ್ತಾರಾ, ಖಂಡಿತಾ ಆಗಲ್ಲ ಎಂದರು.

ಕಾರ್ಯಕ್ರಮದಲ್ಲಿ  ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್, ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಲವರು ಕಾಂಗ್ರೆಸ್ ಸೇರ್ಪಡೆ
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡರ ಅಣ್ಣನ ಮೊಮ್ಮಗ ಸಾರಂಗಿ ಮಂಜುನಾಥ್, ಜಿ.ಪಂ.ಮಾಜಿ ಸದಸ್ಯ ಅಘಲಯ ಮಂಜುನಾಥ್, ಸೊಳ್ಳೇಪುರ ಮಂಜಪ್ಪ,  ರಂಗನಾಥಪುರ ಕ್ರಾಸ್ ಗ್ರಾ.ಪಂ.ಅಧ್ಯಕ್ಷ ಚೇತನ್, ಬಳ್ಳೇಕೆರೆ ಗ್ರಾ.ಪಂ.ಅಧ್ಯಕ್ಷ  ಯೋಗಣ್ಣ, ವಕೀಲ ಎಸ್.ಆರ್.ನವೀನ್‌ಕುಮಾರ್,ವೆಂಕಟೇಶ್, ಇಂದಿರಾಸತೀಶ್ ಬಾಬು ಸೇರಿದಂತೆ ನೂರಾರು ಮುಖಂಡರು  ವಿವಿಧ ಪಕ್ಷಗಳನ್ನು ತೊರೆದು  ಡಿ. ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್, ಮಾಜಿ ಶಾಸಕ ಬಿ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನ್ಸೂರ್‌ಖಾನ್, ಕಾಂಗ್ರೆಸ್ ಮುಖಂಡರಾದ  ಬೂಕನಕೆರೆ ವಿಜಯ್ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕೆ.ಟಿ.ಗಂಗಾಧರ್, ಬಿ.ಟಿ.ವೆಂಕಟೇಶ್, ವಿ.ಮಂಜೇಗೌಡ, ಮಾಧವಪ್ರಸಾದ್, ಸಾಸಲು ಈರಪ್ಪ, ಹರಳಹಳ್ಳಿ ವಿಶ್ವನಾಥ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ