Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಆಸ್ತಿ ವಿವರ

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ದಿವಂಗತ ಎಸ್.ಡಿ.ಜಯರಾಮ್ ಅವರ ಪುತ್ರ ಅಶೋಕ್ ಜಯರಾಮ್ ಅವರ ಆಸ್ತಿ ವಿವರ ಇಂತಿದೆ.

ಬಿ.ಇ ಪದವೀಧರರಾಗಿರುವ ಅವರ ಕೈಯಲ್ಲಿ 74 ಸಾವಿರ ನಗದು,ಬೆಂಗಳೂರಿನ ಸ್ಟಾಂಡರ್ಡ್ ಚಾರ‍್ಟರ್ಡ್ ಬ್ಯಾಂಕ್‌ನಲ್ಲಿ 1.64ಕೋಟಿ ರೂ. ಠೇವಣಿ, ಒಂದು ಟೊಯೋಟಾ ಇನ್ನೋವಾ ಕಾರು, 100 ಗ್ರಾಂ ಚಿನ್ನ, 1ಕೆ.ಜಿ ಬೆಳ್ಳಿ ಸೇರಿದಂತೆ 2.75ಲಕ್ಷ ರೂ. ಮೌಲ್ಯದ ಚರಾಸ್ತಿ, 3ಎಕರೆ 10 ಗುಂಟೆ ಕೃಷಿ ಜಮೀನು, ಮೈಸೂರಿನಲ್ಲಿ ಒಂದು ನಿವೇಶನ, ಮಂಡ್ಯದಲ್ಲಿ ಒಂದು ಮನೆ ಸೇರಿದಂತೆ 3.37ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 78.67 ಲಕ್ಷ ರೂ. ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ.

ಪತ್ನಿ ಬಿ.ಎಸ್.ಅಕ್ಷತಾ ಅವರ ಕೈಯಲ್ಲಿ 1.18ಲಕ್ಷ ರೂ., 1 ಕಿಲೋ ಚಿನ್ನ, 5 ಕೆಜಿ ಬೆಳ್ಳಿ ಸೇರಿದಂತೆ 81.10 ಲಕ್ಷ ರೂ. ಮೌಲ್ಯದ ಚರಾಸ್ತಿ, ಪಾಲುದಾರಿಕೆಯಲ್ಲಿ ಖರೀದಿಸಿದ ವಾಣಿಜ್ಯ ಕಟ್ಟಡ ಸೇರಿದಂತೆ 1.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 13.33ಲಕ್ಷ ರೂ. ಸಾಲವಿದೆ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!