ನಾಗಮಂಗಲ ಪಟ್ಟಣದ ಮೇಘಲಕೇರಿಯಲ್ಲಿರುವ ಈದ್ಗಾ ಮೈದಾನದಲ್ಲಿ, ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದವರು ಶನಿವಾರ ರಂಜಾನ್ ಹಬ್ಬಕ್ಕೆ ತೆರೆ ಎಳೆದರು.
ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆಯೊಂದಿಗೆ ಮುಸ್ಲಿಂ ಸಮುದಾಯದ ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಮುಖಂಡ ಸರ್ದಾರ್ ಮಾತನಾಡಿ, ಶಾಂತಿ ಸೌಹಾರ್ದತೆ ಸಂದೇಶವನ್ನು ನೀಡಿದರು. ಪರಸ್ಪರ ಎಲ್ಲರೂ ಸಮಾನ ಮನಸ್ಸಿನಿಂದ ತಮ್ಮ ಮನಸ್ಸಿನಲ್ಲಿ ಏನೇ ನೂನ್ಯತೆಗಳು ಇದ್ದರು, ಆ ನೂನ್ಯತೆಗಳನ್ನ ಬದಿಗೊತ್ತಿ ಎಲ್ಲರು ಸಮಾನರಾಗಿ ಬದುಕಬೇಕು. ಶಾಂತಿ ಸೌಹಾರ್ದ ರೀತಿಯಲ್ಲಿ ಜೀವನ ನೆಡೆಸುವುದುದನ್ನು ಈ ಹಬ್ಬದ ಉಪವಾಸ ಆಚರಣೆಯಿಂದ ಕಲಿಯಬಹುದು. ನಾವೆಲ್ಲ ಒಂದೇ ಎನ್ನುವಂತಹ ಭಾವನೆ ಎಲ್ಲರಲ್ಲೂ ಮೂಡಬೇಕೆಂದರು. ಮುಸ್ಲಿಂ ಬಾಂಧವರಿಗೆಲ್ಲ ಪರಸ್ಪರ ರಂಜಾನ್ ಹಬ್ಬದ ಶುಭಾಶಯಗಳನ್ನು ವಿನಮಯ ಮಾಡಿಕೊಂಡರು.




