ಭಾರತೀನಗರದ ಕಾಂಗ್ರೆಸ್ ಯುವ ಮುಖಂಡ ಆಶಯ್ ಮಧುಮಾದೇಗೌಡರ ಹುಟ್ಟುಹಬ್ಬವನ್ನು ಕಾಂಗ್ರೆಸ್ ಕಾರ್ಯಕರ್ತರು ಭಾರತೀನಗರದ ಭಾರತೀಕಾಲೇಜಿನ ಆವರಣದಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.
ನಂತರ ಮಾತನಾಡಿದ ಆಶಯ್ ಮಧುಮಾದೇಗೌಡ, ನಮ್ಮ ತಂದೆ ಮಧುಜಿಮಾದೇಗೌಡ ಮತ್ತು ತಾತ ದಿ.ಜಿ.ಮಾದೇಗೌಡ ಅವರ ಅಭಿಮಾನಿಗಳು ನನ್ನ ಮೇಲೂ ಪ್ರೀತಿ ತೋರಿಸಿ ನನ್ನ ಹುಟ್ಟುಹಬ್ಬವನ್ನು ಪ್ರತೀ ವರ್ಷ ಆಚರಣೆ ಮಾಡುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಅಧಿಕಾರ ಇರಲಿ, ಇಲ್ಲದಿರಲಿ ಯಾವಾಗಲು ಅಭಿಮಾನಿಗಳು ಮತ್ತು ಕಾರ್ಯಕರ್ತರು ನಮ್ಮೊಂದಿಗಿದ್ದಾರೆ. ಮುಂದೆಯೂ ನಮ್ಮೊಂದಿಗೆ ಇರುತ್ತಾರೆಂಬ ಆಶಾಮನೋಭಾವನೆಯನ್ನು ಹೊಂದಿದ್ದೇವೆ ಎಂದರು.
ನಂತರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಉಪನ್ಯಾಸಕರು ಬೃಹತ್ ಗಾತ್ರದ ಕೇಕ್ ಕತ್ತರಿ ಹಾರ ತುರಾಯಿ ಹಿಡಿದು ಅಭಿನಂದಿಸಿ ಆಶಯ್ಮಧುಮಾದೇಗೌಡರಿಗೆ ಸಿಹಿ ತಿನಿಸುವ ಮೂಲಕ ಶುಭಾಹಾರೈರಿಸಿದರು.
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಆಶಯ್ ಮಧುಮಾದೇಗೌಡ ಮತ್ತು ಮಧುಜಿಮಾದೇಗೌಡ ಅವರಿಗೆ ಬೃಹತ್ ಗಾತ್ರದ ಹೂವಿನಹಾರ ಹಾಕಿ ಅಭಿನಂದಿಸಿದರು.
ನಂತರ 2 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ಔತಣಕೂಟನ್ನು ಏರ್ಪಡಿಸಲಾಗಿತ್ತು.
ಇದಕ್ಕೂ ಮೊದಲು ತಮ್ಮ ಮನೆದೇವರಾದ ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆಸಲ್ಲಿಸಿದರು.
ಈ ಸಂದರ್ಭದಲ್ಲಿ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ನಿವೃತ್ತ ಕಾರ್ಯಪಾಲಕ ಇಂಜಿನೀಯರ್ ಬಸವರಾಜೇಗೌಡ, ಜಿ.ಪಂ ಮಾಜಿ ಸದಸ್ಯರಾದ ಚಂದೂಪುರ ಪಾಪಣ್ಣ, ರಾಜೀವ್, ತಾ.ಪಂ ಮಾಜಿ ಸದಸ್ಯ ಗಿರೀಶ್, ಮುಖಂಡರಾದ ಆರ್.ಸಿದ್ದಪ್ಪ, ಗುರುದೇವರಹಳ್ಳಿ ಸಿದ್ದೇಗೌಡ, ಪಿ.ನಿಖಿಲ್, ಪ್ರಸನ್ನ, ವಿನಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




