Saturday, May 18, 2024

ಪ್ರಾಯೋಗಿಕ ಆವೃತ್ತಿ

ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಹಿಂಸಾಚಾರ ಶ್ಲಾಘಿಸಿದ ಯೋಗಿ ಆದಿತ್ಯನಾಥ್

ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಹಿಂಸಾಚಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಶ್ಲಾಘಿಸಿದ್ದಾರೆ. ಮಧ್ಯಪ್ರಾಚ್ಯ ದೇಶವು ತಾಲಿಬಾನಿ ಮನಸ್ಥಿತಿಯನ್ನು ಹತ್ತಿಕ್ಕುತ್ತಿದೆ ಎಂದು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಸಾರ್ವಜನಿಕ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಸ್ರೇಲ್-ಹಮಾಸ್ ಯುದ್ಧವನ್ನು ಉಲ್ಲೇಖಿಸಿ, ”ತಾಲಿಬಾನ್ ಕಾ ಅಪ್ಚಾರ್ ತೋ ಬಜರಂಗಬಲಿ ಕಿ ಗದಾ ಹೈ ಹೈ (ಹನುಮಂತನ ಮಚ್ಚಿನಿಂದ ಮಾತ್ರ ತಾಲಿಬಾನ್ ನಿರ್ಮೂಲನೆ ಸಾಧ್ಯ)” ಎಂದು ಹೇಳುವ ಮೂಲಕ ಹಿಂಸಾಚಾರವನ್ನು ಬೆಂಬಲಿಸಿದ್ದಾರೆ.

”ದೇಖ್ ರಹೇ ಹೈ ನಾ ಈಸ್ ಸಮಯ್ ಗಾಜಾ ಮೇ ಇಸ್ರೇಲ್ ತಾಲಿಬಾನಿ ಮನ್ಸಿಕ್ತಾ ಕೋ ಕೈಸೇ ಕುಚಾಲ್ನೆ ಕಾ ಕಾಮ್ ಕರ್ ರಹಾ ಹೈ (ಗಾಜಾದಲ್ಲಿ ಇಸ್ರೇಲ್ ಹೇಗೆ ತಾಲಿಬಾನಿ ಮನಸ್ಥಿತಿಯನ್ನು ಹತ್ತಿಕ್ಕುತ್ತಿದೆ ಎಂಬುದನ್ನು ನೀವು ನೋಡಬಹುದು)” ಎಂದರು.

ಅಕ್ಟೋಬರ್ 7 ರಂದು, ಹಮಾಸ್ ಸಶಸ್ತ್ರ ಗುಂಪು ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸಿತು, ಇದರ ಪರಿಣಾಮವಾಗಿ 1,400 ಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡರು ಮತ್ತು ಕನಿಷ್ಠ 239 ವ್ಯಕ್ತಿಗಳನ್ನು ಒತ್ತೆಯಾಳಾಗಿಸಿಕೊಂಡರು.

ಈ ಘಟನೆಯ ನಂತರ, ಇಸ್ರೇಲ್ ಗಾಜಾದಲ್ಲಿ ಪ್ರತೀಕಾರದ ವೈಮಾನಿಕ ದಾಳಿಗಳನ್ನು ನಡೆಸಿತು, ಇದರ ಪರಿಣಾಮವಾಗಿ 8,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಿಯಂತ್ರಿಸುವ ಆರೋಗ್ಯ ಸಚಿವಾಲಯ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!