ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನನ್ನನ್ನು ವರಿಷ್ಠರು ಕಣಕ್ಕಿಳಿಸಿದ್ದು, ನನಗೊಂದು ಅವಕಾಶ ನೀಡುವ ಮೂಲಕ ನಿಮ್ಮ ಸೇವೆಗೆ ಅನುವು ಮಾಡಿಕೊಡಬೇಕೆಂದು ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಜನರಲ್ಲಿ ಮನವಿ ಮಾಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲ್ಲೇಗೆರೆ, ಮೋಳೆ, ಚಂದಗಾಲು, ಚಲ್ಲನಾಯಕನಹಳ್ಳಿ, ದ್ಯಾಪಸಂದ್ರ, ಆನಸೋಸಲು, ರಾಜೇಗೌಡನದೊಡ್ಡಿ, ಚಿಕ್ಕಬಳ್ಳಿ ಹಾಗೂ ತಂಗಳಗೆರೆ ಮತ್ತಿತರ ಗ್ರಾಮದಲ್ಲಿ ಜೆಡಿಎಸ್ ನಾಯಕರುಗಳು ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆಡಿಎಸ್ ವರಿಷ್ಠರಾದ ದೇವೇಗೌಡರು ನನಗೆ ಬಿ.ಫಾರಂ ನೀಡಿ ಅಭ್ಯರ್ಥಿ ಮಾಡಿದ್ದಾರೆ. ಇದರಿಂದ ಇತರ ಟಿಕೆಟ್ ಆಕಾಂಕ್ಷಿತರಿಗೆ ಬೇಸರವಾಗಿದೆ.ಆದರೂ ಪಕ್ಷ ನೀಡಿರುವ ಜವಾಬ್ದಾರಿಯನ್ನು ಹೊತ್ತು,ಮಂಡ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗುವೆ ಎಂದರು.
ನಂತರ ಬಿ.ಆರ್. ರಾಮಚಂದ್ರುರವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚಿಸಿದರು.




