ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ ನರೇಂದ್ರಸ್ವಾಮಿ ಪರ ಚುನಾವಣಾ ಪ್ರಚಾರ ನಡೆಸಲಾಯಿತು.
ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ದಕ್ಷ ಆಡಳಿತಕ್ಕಾಗಿ ಸ್ವಾಭಿಮಾನದ ಚುನಾವಣೆ ನಡೆಯಬೇಕಿದೆ. ಕನಾ೯ಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕ ಬರಲಿದ್ದು, ಮಳವಳ್ಳಿಯಲ್ಲಿಯೂ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಜವಾಬ್ದಾರಿಯಾಗಿ ಕೆಲಸ ಮಾಡಲು ಅವಕಾಶ ನೀಡಿ, ಕುಡಿಯುವ ನೀರು, ಶಾಲೆ, ರಸ್ತೆ, ಶಿಕ್ಷಣ ಸೇರಿದಂತೆ ಸವಾ೯ಂಗೀಣ ಅಭಿವೃದ್ದಿಗೆ ಅವಕಾಶ ನೀಡಿ ಎಂದರು.
ಮಳವಳ್ಳಿ ಕ್ಷೇತ್ರದಲ್ಲಿ ಬೂಟಾಟಿಕೆ ರಾಜಕಾರಣ ಮಾಡಲಾಗುತ್ತಿದೆ. ಇಲ್ಲಿನ ಶಾಸಕರು ನನಗೆ ಮನೆ ಇಲ್ಲ ಎನ್ನುವುದು, ತಾಲ್ಲೂಕಿಗೆ ಅವಮಾನವಾಗಿದೆ. ಮಾದರಿ ಕ್ಷೇತ್ರಕ್ಕಾಗಿ ನನ್ನನ್ನು ಗೆಲ್ಲಿಸಿ, ನಿರುದ್ಯೋಗ ನಿವಾರಣೆಗೆ, ಕಾಖಾ೯ನೆ ಸ್ಥಾಪನೆ, ನೀರಾವರಿ ಶಾಶ್ವತ ಪರಿಹಾರ ನಿಮ್ಮ ಹಾರೈಕೆ, ಬೆಂಬಲ, ಅಶಿ೯ವಾದ ನರೇಂದ್ರಸ್ವಾಮಿಯ ಮೇಲಿರಲಿ ಎಂದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಟಿಎಪಿಎಂಎಸ್ ನಿರ್ದೇಶಕ ಬಸವೇಶ್, ಶಿವಲಿಂಗು ಶಾಂತರಾಜು, ಮಲ್ಲಯ್ಯ, ವಕೀಲ ಜಗದೀಶ್ ಸಿ.ಮಾಧು, ಶಾಂತರಾಜು ಸೇರಿದಂತೆ ಇತರರು ಇದ್ದರು.




