ರಾಜ್ಯ ಬಿಜೆಪಿ ಮುಖಂಡರೆಲ್ಲ ಎಷ್ಟರಮಟ್ಟಿಗೆ ಗುಲಾಮರಾಗಿದ್ದಾರೆ ಎಂಬುದಕ್ಕೆ ಈ ಪಟ ಸಾಕ್ಷಿ ನುಡಿಯುತ್ತಿದೆ. ನಮಸ್ಕಾರ ಮಾಡಿ ಗೌರವ ಸೂಚಿಸುವುದು ನಮ್ಮ ಸಂಸ್ಕೃತಿ. ಆದರೆ, ವಯಸ್ಸಿನಲ್ಲಿ ಹಿರಿಯರಾದವರು ತಮಗಿಂತ ಕಿರಿಯರ ಕಾಲಿಗೆ ಬೀಳುವುದಿಲ್ಲ. ಟಿಕೆಟ್ ತಪ್ಪಿರುವ ಶಾಸಕ ರಾಮದಾಸ್ ಅವರನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ ಎಂದು ಜೆಡಿಎಸ್ ಜರಿದಿದೆ.
ರಾಜ್ಯ @BJP4Karnataka ದ ಮುಖಂಡರೆಲ್ಲ ಎಷ್ಟರಮಟ್ಟಿಗೆ ಗುಲಾಮರಾಗಿದ್ದಾರೆ ಎಂಬುದಕ್ಕೆ ಈ ಪಟ ಸಾಕ್ಷಿ ನುಡಿಯುತ್ತಿದೆ. ನಮಸ್ಕಾರ ಮಾಡಿ ಗೌರವ ಸೂಚಿಸುವುದು ನಮ್ಮ ಸಂಸ್ಕೃತಿ. ಆದರೆ, ವಯಸ್ಸಿನಲ್ಲಿ ಹಿರಿಯರಾದವರು ತಮಗಿಂತ ಕಿರಿಯರ ಕಾಲಿಗೆ ಬೀಳುವುದಿಲ್ಲ. ಟಿಕೆಟ್ ತಪ್ಪಿರುವ ಶಾಸಕ ರಾಮದಾಸ್ ಅವರನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ.1/3 pic.twitter.com/Fg6ph9EETt
— Janata Dal Secular (@JanataDal_S) April 25, 2023
“>
ಚುನಾವಣಾ ಚಾಣಕ್ಯ ಎಂಬ ಮುಖವಾಡ ಧರಿಸಿರುವ ಕುತಂತ್ರಿ ಅಮಿತ್ ಶಾ ಅವರ ವಯಸ್ಸು 58. ಅದೇ ಕಾಲಿಗೆ ಎರಗಿ ಗುಲಾಮಿ ಮನಸ್ಥಿತಿ ತೋರಿರುವ ರಾಮದಾಸ್ ಅವರ ಅಧಿಕೃತ ವಯಸ್ಸು 63. ವಯಸ್ಸಿನ ಅಂತರ ಇಷ್ಟಿದ್ದಾಗಲೂ ಹೈಕಮಾಂಡ್ ಕಾಲಿಗೆ ಎರಗುವ ಸ್ಥಿತಿ ರಾಜ್ಯ ಬಿಜೆಪಿ ಮುಖಂಡರಿಗೆ ಬಂದಿರುವುದು ಶೋಚನಿಯ ಎಂದು ಜೆಡಿಎಸ್ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
ಇಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ, ದೆಹಲಿಯಿಂದಲೇ ಆಡಳಿತ ನಡೆಸುತ್ತಾರೆ ಎಂದು ರಾಜ್ಯದ ಜನ ಮಾತನಾಡುತ್ತಿದ್ದಾರೆ. ಇವರ ಈ ನಡಾವಳಿ, ಅತೀಯಾದ ಹೈಕಮಾಂಡ್ ಓಲೈಕೆ ಜನರಿಗೆ ಹೇವರಿಕೆ ತರಿಸಿದೆ. ಗೌರವ, ಗುಲಾಮಗಿರಿ, ಕನ್ನಡಿಗರ ಸ್ವಾಭಿಮಾನ ಇವೆಲ್ಲದರ ವ್ಯತ್ಯಾಸವೇ ಗೊತ್ತಿಲ್ಲದಷ್ಟು ಕುಸಿದಿರುವ ರಾಜ್ಯ ಬಿಜೆಪಿಗೆ ಸೋಲಿನ ಕ್ಷಣಗಣನೆ ಆರಂಭವಾಗಿದೆ ಜೆಡಿಎಸ್ ಹೇಳಿದೆ.




