Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ವಿ.ಸಿ.ನಾಲೆಯಲ್ಲಿ ಮುಳುಗಿ ಐವರು ನೀರು ಪಾಲು

ಮಂಡ್ಯ ತಾಲ್ಲೂಕಿನ ಬಸರಾಳು ಸಮೀಪದ ದೊಡ್ಡ ಕೊತ್ತಗೆರೆ ಬಳಿ ನೀರು ಮುಳುಗಲು ವಿ.ಸಿ.ನಾಲೆ ಇಳಿದ ಐವರು ಜಲ ಸಮಾಧಿ ಆಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೂಲತಃ ಬೆಂಗಳೂರಿನ ನೀಲಸಂದ್ರದ ಹನ್ಸಿಯಾ ಬೇಗಂ (34), ತಸ್ಮೀಯಾ (22), ಮಹತಾಬ್ (10) ಸೇರಿದಂತೆ  ಹತೀಕಾ, ಅರ್ಷಕ್ ಎಂಬ ಐವರು ನೀರು ಪಾಲಾಗಿದ್ದಾರೆ. ಸಾವಿಗೀಡಾದ ಐವರು ಸಂಬಂಧಿಕರ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಇಂತಹ ದುರ್ಘಟನೆ ಸಂಭವಿಸಿದೆ.

ಐವರು ಪೈಕಿ ಮೂವರು ಶವಗಳು ಪತ್ತೆಯಾಗಿದ್ದು, ಇನ್ನಿಬ್ಬರ ಶವಗಳಿಗಾಗಿ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಬಸರಾಳು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ