Thursday, November 19, 2026

ಪ್ರಾಯೋಗಿಕ ಆವೃತ್ತಿ

HDK ಸಿಎಂ ಆಗಲು ಜೆಡಿಎಸ್ ಅಭ್ಯರ್ಥಿ ಗೆಲುವು ಅಗತ್ಯ : ಹೆಚ್.ಎಸ್.ಮಂಜು

ಜನಪರ-ರೈತಪರ ಸರ್ಕಾರ ರಚನೆಗಾಗಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಜೆಡಿಎಸ್ ಅಭ್ಯರ್ಥಿಗಳ ಗೆಲುವು ಅಗತ್ಯ ಎಂದು ನಗರಸಭಾ ಅಧ್ಯಕ್ಷ ಹೆಚ್.ಎಸ್.ಮಂಜು ಹೇಳಿದರು.

ಮಂಡ್ಯ ನಗರಸಭೆ ವ್ಯಾಪ್ತಿಯ ಕಾಳಪ್ಪ ಬಡಾವಣೆ, 8ನೇ ವಾರ್ಡ್ ಮರಿಗೌಡ ಬಡಾವಣೆ, 35ನೇ ವಾರ್ಡಿನ ದಾಸೇಗೌಡನ ದೊಡ್ಡಿ ಬಡಾವಣೆ ಸೇರಿವಂತೆ ವಿವಿಧ ವಾರ್ಡ್ ಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಆರ್. ರಾಮಚಂದ್ರ ಪರ ಮತಯಾಚನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೇ.10ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಪ್ರತಿ ಭೂತ್ ಮಟ್ಟದ ಜೆಡಿಎಸ್ ನಾಯಕರು, ವಾರ್ಡ್ ಸದಸ್ಯರು, ಕಾರ್ಯಕರ್ತರು ಮತದಾರರಿಗೆ ಪಂಚರತ್ನ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಕರಪತ್ರ ನೀಡಿ ಮತದಾನ ಮಾಡುವಂತೆ ಮನವಿ ಮಾಡಿ ಎಂದು ತಿಳಿಸಿದರು.

ಮಂಡ್ಯ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತರು, ಸಮಾಜಮುಖಿ ಚಿಂತನೆಯುಳ್ಳ ಸಮಾಜ ಸೇವಕರನ್ನು ವರಿಷ್ಠರಾದ ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಅವರು ಆಶೀರ್ವಾದ ಮಾಡಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ, ಜನಸೇವೆಗಾಗಿ ಜೆಡಿಎಸ್ ಗೆಲ್ಲಿಸಿ ಎಂದು ಕೋರಿದರು.

ಜೆಡಿಎಸ್ ನಗರ ಘಟಕ ಅಧ್ಯಕ್ಷ ಗೌರೀಶ್ ಇನ್ನು ಕೇವಲ 8 ದಿನಗಳು ಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು ಮೇ 10ರಂದು ಮತದಾನ ನಡೆಯಲಿದೆ. ಬೂತ್ ಮಟ್ಟದಲ್ಲಿ ಜೆಡಿಎಸ್ ನ ಕಾರ್ಯಕರ್ತರು ಮತದಾರರಿಗೆ ಪಂಚರತ್ನ ಯೋಜನೆಗಳ ಅರಿವು ಮೂಡಿಸಿ ಜೆಡಿಎಸ್ ಗೆ ಮತ ಹಾಕಿಸುವಂತೆ ಮನವಿ ಮಾಡಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಜನಪರ ಯೋಜನೆಗಳನ್ನು ಕೈಗೊಂಡಿದ್ದಾರೆ. ಜನಸೇವೆಗಾಗಿ ಧರ್ಮಸ್ಥಳ ಯಾತ್ರೆ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜು ಬ್ಯಾಗ್ ಗಳನ್ನು ನೀಡಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ, ಬಡರೋಗಿಗಳಿಗೆ, ದೇವಾಲಯಗಳಿಗೆ ಆರ್ಥಿಕ ನೆರವು ನೀಡಿ ಜೀರ್ಣೋದ್ದಾರಕ್ಕಾಗಿ ತನು ಮನ ಧನ ಸಮರ್ಪಿಸಿದ್ದಾರೆ, ಇಂತವರನ್ನು ಕೈ ಬಿಡಬೇಡಿ, ಗೆಲವಿಗೆ ಒಂದು ಅವಕಾಶ ನೀಡಿ ಎಂದು ವಿವರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ