ಪ್ರತಿಯೊಬ್ಬ ಶಾಸಕರು ವರ್ಷಕ್ಕೆ ಮೂರ್ನಾಲ್ಕು ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಬೇಕೆಂದು ಮಂಡ್ಯ ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಿವರಾಮು ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರ ವೇತನದಲ್ಲಿ ಸೀಮಿತವಿಲ್ಲ, ಕರ್ನಾಟಕದಲ್ಲಿ 224 ಶಾಸಕರಿದ್ದು, ಈ ಪೈಕಿ ಪ್ರತಿ ಒಬ್ಬ ಶಾಸಕ ತನ್ನ ಅವಧಿಯಲ್ಲಿ 3-4 ಕಾರ್ಮಿಕ ಮಕ್ಕಳಿಗೆ ವೈದಕೀಯ, ಶಿಕ್ಷಣ ಮತ್ತು ಐ.ಎ.ಎಸ್., ಐ.ಪಿ.ಎಸ್. ನಂತರ ಸ್ಪರ್ಧಾತ್ಮಕ ಹುದ್ದೆಗಳಿಗೆ ಶಿಕ್ಷಣ ನೀಡಿದರೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಸೈನಿಕರು, ರೈತರು ಹಾಗೂ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಒತ್ತು ನೀಡಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರೈತನ ಸಾಲ ಮನ್ನಾ ಮಾಡವ ಬಲದು ಉಚಿತ ರಾಸಾಯನಿಕ ಗೊಬ್ಬರ ಕೊಡಬೇಕು. ರೈತರಿಗೆ ಜಮೀನು ಆಧಾರದ ಮೇರೆಗೆ ಉಚಿತ ಆರ್.ಟಿ.ಸಿ ಕೊಡಬೇಕು. ಜಮೀನು ರಹಿತ ಮಕ್ಕಳಿಗೆ ಪ್ರತಿ ಜಿಲ್ಲಾವಾರು ತಾಲ್ಲೂಕುವಾರು ಉಚಿತ ಶಿಕ್ಷಣ ಕೊಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ದಯಾನಂದ್, ಕಣ್ಣನ್ ಹಾಗೂ ಮುನಿಸ್ವಾಮಿ,ಬಾಲಾಜಿ, ಸಿದ್ದೇಗೌಡ, ನಿಂಗರಾಜು ಉಪಸ್ಥಿತರಿದ್ದರು.




