Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ವಿಜೃಂಭಣೆಯಿಂದ ನಡೆದ ಶ್ರೀ ಲಕ್ಷ್ಮಿ ಜನಾರ್ಧನ ಸ್ವಾಮಿ ಬ್ರಹ್ಮ‌ ರಥೋತ್ಸವ

ಸಹಸಾರು ಭಕ್ತರ ಉದ್ಘೋಷದ ನಡುವೆ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿ ಜನಾರ್ಧನ ಸ್ವಾಮಿ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.

ಮಂಡ್ಯ ನಗರದ ಪೇಟೆ ಬೀದಿಯಲ್ಲಿರುವ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಇಂದು ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಲಕ್ಷ್ಮಿ ಜನಾರ್ಧನ ಸ್ವಾಮಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಮಧ್ಯಾಹ್ನ 1ಗಂಟೆಗೆ ಸರಿಯಾಗಿ ಲಕ್ಷ್ಮಿ ಜನಾರ್ಧನ ಸ್ವಾಮಿ ಸ್ವಾಮಿಯವರನ್ನು ಭವ್ಯವಾಗಿ ಪುಷ್ಪಗಳಿಂದ ಅಲಂಕರಿಸಿದ ರಥೋತ್ಸವದಲ್ಲಿ ಆರೋಹಿಸಿ ವೈಭವದಿಂದ ರಥೋತ್ಸವ ನಡೆಸಲಾಯಿತು.

ಬ್ರಹ್ಮ ರಥೋತ್ಸವದ ಅಂಗವಾಗಿ ಸಕಲ ವಿಧಿ ವಿಧಾನಗಳಿಂದ ಪೂಜೆ, ಪುನಸ್ಕಾರ ಇತ್ಯಾದಿಗಳು ನಡೆಯಿತು.
ಮಂಡ್ಯ , ಸಾತನೂರು , ಕಾಳೇನಹಳ್ಳಿ ಸೇರಿದಂತೆ ಜಿಲ್ಲೆ ಅನೇಕ ಸ್ಥಳಗಳಿಂದ ಭಕ್ತರು ಆಗಮಿಸಿ ರಥೋತ್ಸಕ್ಕೆ ಆಗಮಿಸಿದ್ದರು.

ನಂತರ ಲಕ್ಷ್ಮಿ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಹೊರಟ ರಥೋತ್ಸವ ಪೇಟೆ ಬೀದಿಯ ರಸ್ತೆಗಳಲ್ಲಿ ಭಕ್ತರ ಸಂಭ್ರಮದ ಉದ್ಘೋಷದೊಂದಿಗೆ ಸಾಗಿತು. ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಜನರು ಲಕ್ಷ್ಮಿ ಜನಾರ್ಧನ ಮೂರ್ತಿಗೆ ಹಣ್ಣು ಮತ್ತು ಜವನವನ್ನು ಎಸೆದು ಭಕ್ತಿ ಮೆರೆದರು.

ಲಕ್ಷ್ಮಿ ಜನಾರ್ಧನ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಎಲ್ಲರಿಗೂ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಬಳಿಕ. ಹಾಲು , ಮಜ್ಜಿಗೆ , ಪಾನಕ , ಸಿಹಿ ತಿಂಡಿಗಳನ್ನು ಚಾಕಲೇಟ್ ಹರಕೆ ಹೊತ್ತ ಭಕ್ತರು ವಿತರಿಸಿ ಧನ್ಯತೆ ಮೆರೆದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ