Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಅಂಚೆ ಮತದಾನ ಗೌಪ್ಯತೆ ಕಾಪಾಡುವುದು ಮುಖ್ಯ : ತನ್ಮಯ್ ಚಕ್ರಭರ್ತಿ

ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆ ಮನೆಯಿಂದಲೇ ಮತ ಚಲಾಯಿಸಲು ಅನುಮತಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಮೇ 3, 4 ಹಾಗೂ 5 ರಂದು ಮಾಡಲಾಗಿದೆ. ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗಳು ಮತದಾರರು ಮತ ಚಲಾಯಿಸುವಾಗ ಗೌಪ್ಯತೆಗೆ ಆದ್ಯತೆ ನೀಡಬೇಕು ಎಂದು ಮಂಡ್ಯ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ತನ್ಮಯ್ ಚಕ್ರಭರ್ತಿ ಅವರು ತಿಳಿಸಿದರು.

ಅವರು ಇಂದು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಕುರಿತಂತೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮತದಾನ ಮನೆಯಲ್ಲಿ ನಡೆಯುವುದರಿಂದ ಮತದಾನ ಮಾಡಲು ತಾವು ವ್ಯವಸ್ಥೆ ಮಾಡುವ ಕಂಪಾರ್ಟ್‍ಮೆಂಟ್‍ನಲ್ಲಿ ಬೆಳಕು ಇಲ್ಲ, ವಯಸ್ಸಾಗಿದೆ ಸಹಯಕರು ಬೇಕು ಈ ರೀತಿ ಸಮಸ್ಯೆಗಳು ಬರುತ್ತದೆ. ಇವುಗಳಿಗೆ ವಿಚಲಿತರಾಗದೇ ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಪಾಲಿಸಿ. ಮತದಾನದ ಗೌಪ್ಯತೆ ಕಪಾಡಿ ತಮ್ಮೊಂದಿಗೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಇರುತ್ತಾರೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 2630 ಮತದಾರರು ಹಾಗೂ 778 ವಿಕಲಚೇತನರು ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಮತದಾನಕ್ಕಾಗಿ 59 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಇಬ್ಬರೂ ಪೋಲಿಂಗ್ ಅಧಿಕಾರಿ, ಒಬ್ಬರೂ ಮೈಕ್ರೋ ಅಬ್‍ಸರ್‍ವರ್, ಒಬ್ಬರೂ ಪೊಲೀಸ್ ಹಾಗೂ ಒಬ್ಬರೂ ವಿಡಿಯೋ ಗ್ರಾಫರ್ ಇರುತ್ತಾರೆ. ಮತದಾನ ಪ್ರಕ್ರಿಯೆ ಬೆಳಿಗ್ಗೆ 9 ರಿಂದ 5 ಗಂಟೆಯವರೆಗೆ ನಡೆಯಲಿದೆ. ಪ್ರತಿದಿನ ಪ್ರಕ್ರಿಯೆ ಮುಗಿದ ನಂತರ ವಿಡಿಯೋಗ್ರಾಫರ್ ಗಳಿಂದ ಅನ್‍ಎಡಿಟೆಡ್ ವಿಡಿಯೋವನ್ನು ಚುನಾವಣಾಧಿಕಾರಿಗಳಿಗೆ ತಲುಪಿಸಬೇಕು ಎಂದರು.

ಮನೆಯಲ್ಲೇ ಮತದಾನ ಮಾಡಲು ಅನುಮತಿ ನೀಡಿರುವ ಮತದಾರರು ಸಿಬ್ಬಂದಿಗಳು ಬಂದ ಸಂದರ್ಭದಲ್ಲಿ ಮತದಾನ ಮಾಡಬೇಕು ಮೇ 10 ರಂದು ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜು, ಚುನಾವಣಾ ಅಧಿಕಾರಿಗಳಾದ ಎಸ್. ಹೆಚ್ ಕೀರ್ತನ, ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಎಂ.ಬಾಬು, ಕೃಷ್ಣಕುಮಾರ್, ನಾಗರಾಜು ಪೋಸ್ಟಲ್ ನೋಡಲ್ ಅಧಿಕಾರಿ ಜಾನ್ಸನ್ ಹಾಗೂ ಇನ್ನಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!