ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಶಾಂತಿಯುತ ಹಾಗೂ ಮುಕ್ತ ಚುನಾವಣೆ ನಡೆಸಲು 16 ಸಿಎಪಿಎಫ್ ಪೊಲೀಸ್ ತುಕಡಿಗಳನ್ನು ಭದ್ರತಾ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಈಗಾಗಲೇ 1ನೇ ಹಂತದಲ್ಲಿ 5 ತುಕಡಿಗಳು, 2ನೇ ಕುಂತದಲ್ಲಿ 9 ಹಾಗೂ 3ನೇ ಹಂತದಲ್ಲಿ 2 ತುಕಡಿಗಳು ಸೇರಿದಂತೆ, 16 CAPF ತಂಡಗಳು ಆಗಮಿಸಿದ್ದು, ಉಳಿದಂತೆ 14 ತಂಡಗಳು ಇಂದು ಜಿಲ್ಲೆಗೆ ಆಗಮಿಸಲಿದೆ ಎಂದರು.
CAPF ಸಿಬ್ಬಂದಿಯನ್ನು ಭದ್ರತಾ ಕೊಠಡಿಯ ಭದ್ರತಾ ವ್ಯವಸ್ಥೆಗೆ ಹಾಗೂ ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಿದ್ದು, ಉಳಿದ ತಂಡಗಳು ವಲ್ನರೆಬಲ್ ಮತ್ತು ಕ್ರಿಟಿಕಲ್ ಮತಗಟ್ಟೆಗಳ ವ್ಯಾಪ್ತಿಯಲ್ಲಿ ರವ್ ಮಾರ್ಚ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ 225 ರೂಟ್ ಮಾರ್ಚ್‌ಗಳನ್ನು ಮಾಡಲಾಗಿದೆ ಎಂದರು.
ವಿಜಿಲ್‌ನಲ್ಲಿ ಒಟ್ಟು 248 ದೂರು ಅರ್ಜಿಗಳು ಸ್ವೀಕೃತವಾಗಿದ್ದು, ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಹೇಳಿದರು.




