Saturday, November 21, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ದಲಿತರನ್ನು ಊರಿಂದ ಬೇರೆ ಕಡೆ ಕಳಿಸಿ ಕೊಡಿ ಎಂದ ಗ್ರಾಮಸ್ಥರು

ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕಿನ ಕುಪ್ಪಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಲು ಹೋದ ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಗ್ರಾಮಸ್ಥರು, ”ದಲಿತರನ್ನು(ಎಕೆಎಸ್ ಜನರನ್ನು) ಊರಿಂದ ಬೇರೆ ಜಾಗಕ್ಕೆ ಕಳಿಸಿಕೊಡಿ ಸಾಕು, ಅವರು ನಮ್ಮ ಮನೆಗಳ ಸುತ್ತಲೂ ಇದ್ದು, ನಾವು ಮಧ್ಯದಲ್ಲಿದ್ದೇವೆ” ಎಂದು ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿರುವ ಘಟನೆ ನಡೆದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಚಂದನ್‌ಗೌಡ, ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಹಿಂಗೆಲ್ಲ ಮಾತಾಡಿದ್ರೆ ಕೇಸ್‌ ಹಾಕ್ತಾರೆ,  ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ.

ಚಂದನ್ ಗೌಡ ಪ್ರಚಾರದ ವೇಳೆ ಮೈಕ್‌ ಪಡೆದುಕೊಂಡ ಗ್ರಾಮಸ್ಥನೊಬ್ಬ, “ದಲಿತರನ್ನು ಊರಿಂದ ಬೇರೆ ಜಾಗಕ್ಕೆ ಕಳಿಸಿಕೊಡಿ ಸಾಕು. ಅವರು ನಮ್ಮ ಮನೆಗಳ ಸುತ್ತಲೂ ಇದ್ದು, ನಾವು ಮಧ್ಯದಲ್ಲಿದ್ದೇವೆ, ಇದರಿಂದ ತೊಂದ್ರೆಯಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಗ್ರಾಮದಲ್ಲಿ ಅಸ್ಪೃಶ್ಯತೆ ಜಾರಿಯಲ್ಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಯಾಕಪ್ಪ ಅವರನ್ನು ಬೇರೆ ಕಳಿಸಬೇಕು ಎಂದು ಚಂದನ್‌ ಗೌಡ ಪ್ರಶ್ನಿಸಿದಾಗ, ಇದಕ್ಕುತ್ತರಿಸಿದ ವ್ಯಕ್ತಿ, “ನಮಗೆ ದನ-ಕರ ಕಟ್ಟಿಕೊಳ್ಳೇಕೆ ತೊಂದರೆ ಆಗ್ತಾ ಇದೆ” ಎಂದು ಹೇಳಿದ್ದಾರೆ. ಹಾಗೆ ಹೇಳಿದ ವ್ಯಕ್ತಿಗೆ ಬುದ್ದಿ ಹೇಳಿದ ಚಂದನ್ ಗೌಡ, “ಸಾಮಾಜಿಕವಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಅದನ್ನ ಕಸಿದುಕೊಳ್ಳೋಕೆ ಆಗಲ್ಲ. ಯಾರನ್ನು ಎಲ್ಲಿಂದಲೂ ಕಳಿಸೋಕೆ ಯಾರಿಗೂ ಹಕ್ಕಿಲ್ಲ. ಹೀಗೆಲ್ಲ ಮಾತಾಡಿದ್ರೆ ಕೇಸ್‌ ಬೀಳ್ತವೆ” ಎಂದು ಎಚ್ಚರಿಸಿದ್ದಾರೆ.

“>

“ನಿಮಗೆ ಅವರನ್ನ ಬೇರೆಡೆ ಕಳಿಸಲೇಬೇಕೆಂದಿದ್ದರೆ, ನನ್ನಿಂದ ಆಗಲ್ಲ. ನನಗೆ ನೀವ್ಯಾರೂ ಮತ ಹಾಕಬೇಡಿ. ಓಟು ಕೇಳೋಕೆ ಬರುವ ಎಂಪಿ ಅಥವಾ ಶಾಸಕನ ಬಳಿ ಕೇಳಿ, ಸ್ಥಳಾಂತರ ಮಾಡಿಸಿಕೊಳ್ಳಿ” ಎಂದು ಕಿಡಿಕಾರಿದ್ದಾರೆ.

ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಭಾರತ ದೇಶದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ದಲಿತರನ್ನು, ಇನ್ನೂ ಮನುಷ್ಯರಂತೆ ಕಾಣಲು ಕೆಲ ಮೇಲ್ಜಾತಿಯ ಜನರು ಸಿದ್ದರಿಲ್ಲ ಎಂಬುದು ಈ ಘಟನೆಯಿಂದ ತಿಳಿದು ಬರುತ್ತಿದೆ. ಇಂತಹ ಅಸ್ಪೃಶ್ಯತೆ ಆಚರಣೆ ವಿರುದ್ದ ಜಾಗೃತಿ ಮೂಡಿಸುವ ಜೊತೆಗೆ, ಜಾತಿ ಕಾರಣಕ್ಕಾಗಿ ದಲಿತರಿಗೆ ಸಮಾನ ಹಕ್ಕುಗಳನ್ನು ನಿರಾಕರಿಸುವ ಇಂತಹ ಕೆಲವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ