ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಚುನಾವಣಾ ಅಕ್ರಮಗಳು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಸಂದರ್ಭಗಳಲ್ಲಿ ಸಾರ್ವಜನಿಕರು Cvigil App ಮೂಲಕ ನೇರವಾಗಿ ಚಿತ್ರೀಕರಿಸಿ ಛಾಯಾಚಿತ್ರ ಆಡಿಯೋ, ವೀಡಿಯೋ ಸಹಿತ ದೂರು ದಾಖಲಿಸಿದ್ದಲ್ಲಿ, ಸಂಚಾರಿ ದಳ ಹಾಗೂ ಚುನಾವಣಾಧಿಕಾರಿಗಳ ಮೂಲಕ ತ್ವರಿತವಾಗಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ಭಾರತ ಚುನಾವಣಾ ಆಯೋಗವು ಮತದಾರ ಉಪಯೋಗಕ್ಕಾಗಿ ಹಲವು ಆ್ಯಪ್ ಗಳನ್ನು ಸಿದ್ದಪಡಿಸಿದ್ದ ಅವುಗಳ ಮೂಲಕ ಹಲವು ಉಪಯೋಗಗಳನ್ನು ಪಡೆದುಕೊಳ್ಳಬಹುದೆಂದು ಅವರು ತಿಳಿಸಿದ್ದಾರೆ.
Chuvana App (ಚುನಾವಣಾ ಆ್ಯಪ್): ಈ App ಮೂಲಕ ಮತದಾರರು ತಮಗೆ ಸಂಬಂಧಿಸಿದ ಮತಗಟ್ಟೆ ವಿವರಗಳು, ಮತಗಟ್ಟೆಗೆ ಪಥ ಸೂಚಕ ಮಾಹಿತಿ, ಚುನಾವಣಾ ವೇಳಾಪಟ್ಟಿ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿವರ, ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳ ವಿವರ ಹಾಗೂ ಮತದಾರರ ವಿವರ ಪಡೆಯಬಹುದಾಗಿದೆ.
Sakshama-ECI App (ಸಕ್ಷಮಾ -ಇಸಿಐ ಆ್ಯಪ್): ಭಾರತೀಯ ಚುನಾವಣಾ ಆಯೋಗವು ವಿಕಲಚೇತನ ಅಥವಾ ವಿಕಲಚೇತನ (PwDs) ಮತದಾರರ ಗುರುತಿಸುವಿಕೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು Sakshama-ECI App ನ್ನು ಅಭಿವೃದ್ಧಿಪಡಿಸಿದೆ. ಅಗತ್ಯ ವಿವರಗಳನ್ನು ಚುನಾವಣಾ ಆಯೋಗದಿಂದ ದೂರವಾಣಿ ಕರೆ ಸೇವಾ ಸಂಖ್ಯೆಗಳ ಮೂಲಕ ಹಂಚಿಕೊಳ್ಳಬಹುದಾಗಿದೆ. ಯಾವುದೇ ಮತದಾರ ಸೇವೆಗಳನ್ನು ಕೋರಬೇಕಾದಲ್ಲಿ ಮೊದಲ ಬಾರಿಗೆ ತಮ್ಮ ಹೆಸರು, ವಿಳಾಸ ಮತ್ತು ಮೊಬೈಲ್ ವಿವರಗಳನ್ನು ಪ್ರಕಟಿಸಬೇಕಾಗುತ್ತದೆ.
KYC-ECI App (ಕೆವೈಸಿ-ಇಸಿಐ ಆ್ಯಪ್): ದೇಶದಲ್ಲಿ ಕ್ರಿಯಾಶೀಲ ಪ್ರಜಾಸತ್ತಾತ್ಮಕ ಚಟುವಟಿಕೆಗಳನ್ನು ಉತ್ತೇಜಿಸಲು ಭಾರತದ ಚುನಾವಣಾ ಆಯೋಗವು ಹೊಸದಾಗಿ KYC-ECI ಎಂಬ ಮೊಬೈಲ್ App ಅಭಿವೃದ್ಧಿಪಡಿಸಿದೆ. ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅರ್ಭರ್ಥಿಗಳು ನಾಮಪತ್ರದ ಮೂಲಕ ಸಲ್ಲಿಸಿರುವ ಅಪರಾಧದ ಹಿನ್ನೆಲೆಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ಯಾವುದೇ ಮತದಾರರು ತನ್ನ ಮೊಬೈಲ್ ಮೂಲಕ ಪಡೆದುಕೊಳ್ಳಬಹುದು.




