ಮಂಡ್ಯವಿಧಾನಸಭಾ ಕ್ಷೇತ್ರದ ಸ್ವಾಭಿಮಾನಿ ಪಡೆಯ ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಅವರು ಇಂದು ಮಂಡ್ಯ ನಗರದ ವಿವಿಧ ವಾರ್ಡ್ ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಮಂಡ್ಯ ನಗರದ ಕಾಳಿಕಾಂಬ ದೇವಾಲಯದಲ್ಲಿ ಇಂದು ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಶಾಸಕ ಎಂ.ಶ್ರೀನಿವಾಸ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆ.ವಿ.ಶಂಕರಗೌಡರ ಕುಡಿ ಕೆ.ಎಸ್. ವಿಜಯ್ ಆನಂದ್ ಅವರಿಗೆ ಅನ್ಯಾಯವಾಗಿದೆ.ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ನ್ಯಾಯ ನೀಡಬೇಕಿದೆ ಎಂದರು.
ಅವರ ಕ್ರಮ ಸಂಖ್ಯೆ 14 ಆಗಿದ್ದು,ಅವರ ವಜ್ರದ ಗುರುತಿಗೆ ಮತ ನೀಡಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಇದುವರೆವಿಗೂ ನನಗೆ ಕೊಟ್ಟ ಸಹಕಾರವನ್ನು ವಿಜಯಾನಂದ ಅವರಿಗೆ ಕೊಡುವ ಮೂಲಕ ಅವರಿಗೆ ಆಶೀರ್ವಾದ ಮಾಡಿ ಎಂದು ತಿಳಿಸಿದರು.

ಮಂಡ್ಯ ನಗರದ 1, 2, 4,5,6,7,15,16,17 ಮತ್ತು 18 ನೇ ವಾರ್ಡ್ ಗಳಲ್ಲಿ ಸ್ವಾಭಿಮಾನಿ ಪಡೆ ಪಕ್ಷೇತರ ಅಭ್ಯರ್ಥಿ ಕೆ.ಎಸ್. ವಿಜಯಾನಂದ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು ಜನರ ಪ್ರೀತಿ,ವಿಶ್ವಾಸದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನಿ ಪಡೆಯಿಂದ ನಾನು ಸ್ಪರ್ಧೆ ಮಾಡಿದ್ದೇನೆ. ನನ್ನ ಕೈ ಪರಿಶುದ್ಧವಿದೆ. ನನ್ನನ್ನು ನಂಬಿ ತಮ್ಮ ಅಮೂಲ್ಯವಾದ ಮತವನ್ನು ಕ್ರಮ ಸಂಖ್ಯೆ 14ರ ವಜ್ರದ ಗುರುತಿಗೆ ನೀಡುವ ಮೂಲಕ ಜಯಶೀಲರನ್ನಾಗಿ ಮಾಡಿ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.

ನಾವು ಕಷ್ಟಕಾಲದಲ್ಲಿದ್ದೇವೆ ಕೈ ಹಿಡಿಯಿರಿ ನಿಮ್ಮ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕಲ್ಲಹಳ್ಳಿ 6ನೇ ವಾರ್ಡಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಶಾಸಕ ಎಂ.ಶ್ರೀನಿವಾಸ್,ವಿಜಯಾನಂದ ಅವರನ್ನು ನಗರಸಭಾ ಸದಸ್ಯ ರವಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಬೃಹತ್ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್.ಎನ್.ಯೋಗೇಶ್, ಮುಖಂಡ ಮಹಾಲಿಂಗೇಗೌಡ, 35ನೇ ವಾರ್ಡ್ ನಗರಸಭಾ ಸದಸ್ಯ ಪೂರ್ಣಾನಂದ, ಮುಖಂಡರಾದ ಹಮಾಮ್ ಸೂರಿ, ಕೃಷ್ಣ ನಾಯಕ್, ಬಿ.ಲೋಕೇಶ್, ವಿಶಾಲ ರಘು, ಜಯಶೀಲಮ್ಮ, ಕಲ್ಲಹಳ್ಳಿ ಶಂಕರೇಗೌಡ, ಬಸವರಾಜು, ಸೇರಿದಂತೆ ಇತರರು ಭಾಗವಹಿಸಿದ್ದರು.




