Sunday, November 22, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಬಾಲ್ಯವನ್ನು ಮೆಲಕು ಹಾಕಿದ ಯಡಿಯೂರಪ್ಪ

ಈ ದಿನ ನನಗೆ ಬಾಲ್ಯದ ನೆನಪು ಕಾಡುತ್ತಿದೆ, ನಾನು ನನ್ನ ಅಣ್ಣನ ಜೊತೆ ತೆಂಡೆಕೆರೆ ಸಂತೆಗೆ ಹೋಗಿ ಸಂಜೆ ಬರುತ್ತಿದ್ದೇ, ನಮ್ಮನ್ನು ಸಾಕಿದ ಅಣ್ಣ ಮತ್ತು ಮಾವ ಪರಿಶ್ರಮದಿಂದ ಈ ಮಟ್ಟಕ್ಕೆ ಬಂದಿದ್ದೇನೆ, ಇಂತಹ ಸಂದರ್ಭದಲ್ಲಿ ನನ್ನ ಅಣ್ಣ ಇರಬೇಕಿತ್ತು ಎಂದು ಹಳೇಯ ನೆನಪುಗಳನ್ನು ಮೆಲಕು ಹಾಕಿದರು.

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಬಿಜೆಪಿ ಬೃಹತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 130 ಸ್ಥಾನ ಪಡೆದು ಬಿಜೆಪಿ ಸರ್ಕಾರ ರಚಿಸುವುದಲ್ಲಿ ಅನುಮಾನವಿಲ್ಲ, ಅದೇ ರೀತಿ ನಾರಾಯಣಗೌಡರು ಸಚಿವರಾಗುವುದು ಖಚಿತ. ಇದೆ ರೀತಿ ರೈತರಿಗೆ, ಮಹಿಳೆಯರ ಸ್ವಾವಲಂಭಿ ಜೀವನ ನಡೆಸಲು ಅನುಕೂಲ‌ಮಾಡಿದೆ ಎಂದರು.

ನಮ್ಮ ಪಕ್ಷ ಸ್ಪಷ್ಟ ಬಹುಮತ ಬಂದರೆ ಬಿಪಿಎಲ್ ದಾರರಿಗೆ ರಾಜ್ಯದ ಬಿಪಿಎಲ್ ದಾರರಿಗೆ ಪ್ರತಿ ತಿಂಗಳು 10 ಕೆ.ಜಿ.ಅಕ್ಕಿ, ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಹಬ್ಬದ ವೇಳೆ 3 ಉಚಿತ ಗ್ಯಾಸ್‌ ಸಿಲಿಂಡರ್‌, ಬಿಪಿಎಲ್‌ ಕುಟುಂಬಗಳಿಗೆ ಪ್ರತಿ ದಿನ ಅರ್ಧ ಲೀಟರ್‌ ನಂದಿನಿ ಹಾಲನ್ನು ವಿತರಣೆ ಇದರ ಜೊತೆ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಸಿರಿಧಾನ್ಯದ ಪಡಿತರ ಕಿಟ್‌ ನೀಡಲಾಗುವುದು ಎಂದರು.

ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ಒಂದು ಪಕ್ಷ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿರುವ ಪಕ್ಷ, ಅದಕ್ಕೆ  ಮತ ನೀಡಿದರೆ ಯಾವ ಕಾರ್ಯಕರ್ತರಿಗೆ ಬೆಲೆ ಇರುವುದಿಲ್ಲ. ಒಂದು ವರ್ಷ ಎರಡು ತಿಂಗಳು ಮುಖ್ಯಮಂತ್ರಿಯಾಗಿದ್ದ ಮಹಾನುಭವರು ಅಂಬರೀಷ್ ಸ್ಮಾರಕ ನಿರ್ಮಾಣ ಮಾಡಲು ತಿರಸ್ಕರಿಸಿದರು,  ಯಡಿಯೂರಪ್ಪ ಸಿಎಂ ಆದ ಒಂದು ತಿಂಗಳಲ್ಲಿ 5 ಕೋಟಿ ಅನುದಾನವನ್ನು ನೀಡಿ ಸ್ಮಾರಕವನ್ನು ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರಿನಿವಾಸ್, ಜಿ.ಪಂ.ಮಾಜಿ ಉಪಾದ್ಯಕ್ಷ ಕಿಕ್ಕೇರಿ ಪ್ರಭಾಕರ್,ಜಿ. ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್, ತಾ.ಪಂ. ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ,ಬಿಜೆಪಿ ಮುಖಂಡ ಬೂಕಹಳ್ಳಿ ಬಿ. ಸಿ ಮಂಜು, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್ ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ