ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವೈ.ಎಂ.ರೇಷ್ಮಾ ಮಂಜು ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷೆ ಟಿ.ಜೆ.ಅರ್ಪಿತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ರೇಷ್ಮಾ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿಯೂ ಆದ ಮಂಡ್ಯ ಸಿಡಿಪಿಒ ಕುಮಾರಸ್ವಾಮಿ ಅವರು ಅವಿರೋಧ ಆಯ್ಕೆ ಪ್ರಕಟಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷೆ ಪವಿತ್ರಾ, ಸದಸ್ಯರಾದ ಟಿ.ಜೆ.ಅರ್ಪಿತಾ, ಟಿ.ಎಂ.ಸುರೇಶ್, ಲಿಂಗಣ್ಣ, ಭಾರತಿ, ಎಂ.ಎಸ್.ಶ್ರುತಿ, ಶ್ರೀನಿವಾಸಾಚಾರಿ, ಕೆ.ಸಿ.ಹುಚ್ಚೇಗೌಡ, ಪಿಡಿಒ ಕೆ.ಬಿ.ಯೋಗಾನಂದ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮಂಗಲ ಗ್ರಾ.ಪಂ. ಸದಸ್ಯ ಕುಮಾರಗೌಡ, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್, ಉಪಾಧ್ಯಕ್ಷ ಟಿ.ಪ್ರತಾಪ್, ಪದಾಧಿಕಾರಿಗಳಾದ ಟಿ.ಎಸ್.ಮಂಜು, ಮುಖಂಡರಾದ ಶಿವಲಿಂಗೇಗೌಡ, ಟೆಂಟ್ ಕಾಳೇಗೌಡ, ಯಲಾದಹಳ್ಳಿ ಬಾಬು, ಕಮ್ಮನಾಯಕನಹಳ್ಳಿ ದೇವರಾಜು, ಮಲ್ಲಿಗೆರೆ ಲಿಖಿತ್ಕುಮಾರ್, ಹಳುವಾಡಿ ಸಿದ್ದರಾಜು ಅವರು ನೂತನ ಅಧ್ಯಕ್ಷೆಯನ್ನು ಅಭಿನಂದಿಸಿದರು.




