ಚುನಾವಣೆಗಾಗಿ ಗಲ್ಲಿ-ಗಲ್ಲಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಚುನಾವಣಾ ಮಂತ್ರಿ ನರೇಂದ್ರ ಮೋದಿ ಗೆ ಇಂದು ಮಧ್ಯಾಹ್ನ ಊಟ ಬೇಕಿಲ್ಲ. ಬೆಂಗಳೂರಿನ ಬೀದಿ ಬೀದಿಯಲ್ಲಿ ಸಾಮಾನ್ಯ ಜನರು ಹಾಕುತ್ತಿರುವ ಹಿಡಿಶಾಪದಿಂದಲೆ ಅವರ ಹೊಟ್ಟೆ ತುಂಬಲಿದೆ. ನಾಡಿಗೆ ಸಂಕಷ್ಟ ಬಂದಾಗ ತಿರುಗಿ ಕೂಡಾ ನೋಡದ ವ್ಯಕ್ತಿ ಚುನಾವಣೆ ಬಂದಾಗ ಶೋಕಿ ಮಾಡಲು ಬಂದಿದ್ದಾರೆ ಎಂದು ಜೆಡಿಎಸ್ ಆಕ್ರೋಶ ಹೊರ ಹಾಕಿದೆ.
ದುಡಿಮೆಗೆಂದು ಬೆಳ್ಳಂಬೆಳಗ್ಗೆ ಹೊರಟ ಜನರು ಗುರಿ ತಲುಪದೆ ಒಂದು ದಿನದ ಕೂಲಿ ಕಳೆದುಕೊಳ್ಳುವಂತಾಗಿದೆ. ಜನರ ಸಂಕಷ್ಟಗಳ ಬಗ್ಗೆ ಅರಿವೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಬೇಜವಾಬ್ಧಾರಿಯಿಂದ ವರ್ತಿಸಲು ಸಾಧ್ಯ. @BJP4Karnataka ಕಾರ್ಯಕ್ರಮದಿಂದಾಗಿ ಜನರು ಟ್ರಾಫಿಕ್ ನಿಯಂತ್ರಿಸುವ ಪೊಲೀಸರ ಮೇಲೆ ಆಕ್ರೋಶ ತೋರಿಸುತ್ತಿದ್ದಾರೆ.2/3 pic.twitter.com/jjjn0SLsqa
— Janata Dal Secular (@JanataDal_S) May 6, 2023
“>
ದುಡಿಮೆಗೆಂದು ಬೆಳ್ಳಂಬೆಳಗ್ಗೆ ಹೊರಟ ಜನರು ಗುರಿ ತಲುಪದೆ ಒಂದು ದಿನದ ಕೂಲಿ ಕಳೆದುಕೊಳ್ಳುವಂತಾಗಿದೆ. ಜನರ ಸಂಕಷ್ಟಗಳ ಬಗ್ಗೆ ಅರಿವೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಬೇಜವಾಬ್ಧಾರಿಯಿಂದ ವರ್ತಿಸಲು ಸಾಧ್ಯ. ಬಿಜೆಪಿ ಕಾರ್ಯಕ್ರಮದಿಂದಾಗಿ ಜನರು ಟ್ರಾಫಿಕ್ ನಿಯಂತ್ರಿಸುವ ಪೊಲೀಸರ ಮೇಲೆ ಆಕ್ರೋಶ ತೋರಿಸುತ್ತಿದ್ದಾರೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಸಾರ್ವಜನಿಕರು ಸಂಯಮ ಕಳೆದುಕೊಳ್ಳದೆ ಇದೇ ಆಕ್ರೋಶವನ್ನು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಮೂಲಕ ತೋರಿಸಬೇಕು ಎಂದಷ್ಟೆ ನಮ್ಮ ವಿನಂತಿ. ಚುನಾವಣೆಗೆ ತೋರುವ ಈ ಆಸಕ್ತಿ ಜನಕಲ್ಯಾಣಕ್ಕೆ ತೋರಿಸುತ್ತಿದ್ದರೆ ಇಷ್ಟು ಶಾಪಗಳನ್ನು ಜನರಿಂದ ಹಾಕಿಸಿಕೊಳ್ಳುವ ಸ್ಥಿತಿ ಬಿಜೆಪಿ ಪಕ್ಷಕ್ಕೆ ಬರುತ್ತಿರಲಿಲ್ಲ ಜೆಡಿಎಸ್ ವ್ಯಂಗ್ಯವಾಡಿದ್ದಾರೆ.




