ಮಂಡ್ಯ ನಗರದ ಸುತ್ತ ರಿಂಗ್ ರಸ್ತೆ ನಿರ್ಮಿಸಿ, ನಗರವನ್ನು ಹಸಿರು ನಗರವಾಗಿ ವ್ಯವಸ್ಥಿತವಾಗಿ ರೂಪಿಸುವುದು ನನ್ನ ಗುರಿಯಾಗಿದೆ. ಈ ಮೂಲಕ ಮಂಡ್ಯದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ಅದನ್ನು ಸಾಕಾರಗೊಳಿಸಿ ಮತದಾರರು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರ ಮನವಿ ಮಾಡಿದರು.
ನಗರದ ತಾವರೆಗೆರೆ, ಹಾಲಹಳ್ಳಿ, ಸ್ಲಂ ಬೋರ್ಡ್, ಬೋವಿ ಕಾಲೋನಿ ವ್ಯಾಪ್ತಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ, ಜಿಲ್ಲಾ ಕೇಂದ್ರ ಸ್ಥಾನವನ್ನು ಹೊಂದಿರುವ ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸುವ ಕನಸು ಹೊತ್ತಿದ್ದೇನೆ. ಆರೋಗ್ಯ ಸೇವೆ ಗುಣಮಟ್ಟ ಸುಧಾರಣೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಚಿಕ್ಕಮಂಡ್ಯ ಕೆರೆಯಂಗಳದ ಬೀಡಿ ಕಾರ್ಮಿಕರ ಕಾಲೋನಿ ಸಮಸ್ಯೆ ನಿವಾರಣೆ ನನ್ನ ಮೊದಲ ಆದ್ಯತೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಈಗಲೂ ಎಷ್ಟೋ ಕುಟುಂಬಗಳಿಗೆ ಸ್ವಂತ ಮನೆ ಇಲ್ಲ. ದಶಕಗಳಿಂದ ವಾಸಿಸುತ್ತಿರುವ ಸ್ಥಳಗಳಿಗೆ ಸಂಬAಧಿಸಿದ ಹಕ್ಕುಪತ್ರಗಳಿಲ್ಲ. ಅಂತಹ ಜನರಿಗೆ ಹಕ್ಕಪತ್ರ ಕೊಡಿಸಲು ಅವರ ನೆಲದಲ್ಲಿ ಭದ್ರಗೊಳಿಸಲು ಉದ್ದೇಶಿಸಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ಜೆಡಿಎಸ್ ಕರ್ಯಕರ್ತರಿಂದ ಕ್ಷೇತ್ರದಲ್ಲಿ ಎರಡು ಕಡೆ ಪ್ರತ್ಯೇಕವಾಗಿ ಬೈಕ್ ರ್ಯಾಲಿ ನಡೆಸಿ ಪ್ರಚಾರ ನಡೆಸಲಾಯಿತು.
ಮಂಡ್ಯ ನಗರ ವ್ಯಾಪ್ತಿಯಲ್ಲಿ ನಗರದ ಶ್ರೀಕಾಳಿಕಾಂಬ ದೇವಾಲಯ ಆವರಣದಲ್ಲಿ ಅಭ್ಯರ್ಥಿ ಬಿ.ಆರ್.ರಾಮಚಂದ್ರ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅವರು ರ್ಯಾಲಿಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ರ್ಯಾಲಿಯು ರ್ಯಾಲಿಯು ಕೆರೆಯಂಗಳ ಬೀಡಿಕಾರ್ಮಿಕರ ಕಾಲನಿ, ಶಂಕರಮಠ, ಕಲ್ಲಹಳ್ಳಿ, ವಿ.ವಿ.ನಗರ, ಮರೀಗೌಡ ಬಡಾವಣೆ, ಚಾಮುಂಡೇಶ್ವರನಗರ, ನೂರಡಿ ರಸ್ತೆ, ತಾವರೆಗೆರೆ, ಹಾಲಹಳ್ಳಿಯಲ್ಲಿ ರ್ಯಾಲಿ ನಡೆಯಿತು.
ಮತ್ತೊಂದೆಡೆ ಚಿಕ್ಕಮಂಡ್ಯ ಗ್ರಾಮದಿಂದ ಹೊರಟ ಬೈಕ್ರ್ಯಾಲಿಗೆ ಚಿಂದಗಿರಿದೊಡ್ಡಿ, ಪಣಕನಹಳ್ಳಿ, ತಂಡಸನಹಳ್ಳಿ, ಎಂ.ಜಿ.ಬಡಾವಣೆ ಸೇರಿದಂತೆ ಹಲವೆಡೆ ಸಂಚರಿಸಿದರು. ಈ ರ್ಯಾಲಿಗೆ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಸದಸ್ಯರಾದ ನಾಗೇಶ್, ಮಹದೇವ, ರಜಿನಿ, ಮಂಜುಳಾ ಉದಯಶಂಕರ್, ಮನ್ಮುಲ್ ಮಾಜಿ ನಿರ್ದೇಶಕಿ ನೀನಾ ಪಟೇಲ್ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದರು.




