Sunday, May 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಮಾಹಿತಿ ಹಕ್ಕು ಕಾರ್ಯಕರ್ತ ಆನಂದ್ ಗೆ ಜಾಮೀನು : ಪ್ರಗತಿಪರ ಸಂಘಟನೆಗಳ ಒಕ್ಕೂಟ ಹರ್ಷ

ಮಾಹಿತಿ ಹಕ್ಕು ಕಾರ್ಯಕರ್ತ ಮದ್ದೂರು ಆನಂದ್ ಅವರಿಗೆ ಮಂಡ್ಯದ ಜಿಲ್ಲಾ ಸತ್ರ ನ್ಯಾಯಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ

ಆನಂದ್ ಅವರಿಗೆ ಜಾಮೀನು ದೊರೆತಿರುವುದು ಸತ್ಯವಂತಿಕೆಗೆ ದೊರೆತ ಜಯವಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹರ್ಷವ್ಯಕ್ತಪಡಿಸಿದೆ.

ಮದ್ದೂರು ಪುರಸಭೆ ಮುಖ್ಯಾಧಿಕಾರಿ ಆರ್ ಆಶೋಕ್ ಅವರು ತನ್ನ ಅಧಿಕಾರ ದುರ್ಬಳಕೆ ಮಾಡಿಕ್ಕೊಂಡು ತನ್ನ ಅಧೀನ ನೌಕರರ ಮೂಲಕ ಅನಂದ್ ವಿರುದ್ದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ದುರ್ಬಳಕೆ ಮಾಡಿಕ್ಕೊಂಡು ಆನಂದ್ ವಿರುದ್ದ ಸುಳ್ಳು ದೂರು ದಾಖಲಿಸಿ ಕಾರಗೃಹ ವಾಸ ಮಾಡುವಂತೆ ಮಾಡಿದ ಕ್ರಮ ಖಂಡನೀಯ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಸಂಚಾಲಕ ವಿ. ಸಿ. ಉಮಾಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರಿನ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಯ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಪನ್ಮೂಲ ಕ್ರೋಢಿಕರಣ ವಿಷಯದಿ ಮಾಹಿತಿ ಕೇಳಿದ ಆನಂದ್ ಅವರಿಗೆ ಮಾಹಿತಿ ನೀಡುವ ಬದಲಿಗೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕ್ಕೊಂಡಿರುವ ಪುರಸಭೆಯ ಅಧಿಕಾರಿಯ ದುರ್ನಡತೆಯ ವಿರುದ್ದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹೋರಾಟ ರೂಪಿಸಲಿದೆ ಮತ್ತು ಆನಂದ್ ಪರವಾಗಿ ನಿಲ್ಲಲಿದೆ ಎಂದರು.

ಗ್ರಾ. ಪಂ. ಸದಸ್ಯರ ಒಕ್ಕೂಟದ ಗೌರವಾಧ್ಯಕ್ಷ ದಯಾನಂದ್ ವಳಗೆರೆಹಳ್ಳಿಯವರು ಸರ್ಕಾರಿ ಅಧಿಕಾರಿಗಳ, ಪರಿಶಿಷ್ಠ ಜಾತಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರುಪಯೊಗ ಮಾಡುತಿರುವ ಕ್ರಮಕ್ಕೆ ಸರ್ಕಾರ ಕಡಿವಾಣ ಹಾಕಬೇಕೆಂದರು.

ಒಕ್ಕೂಟದ ಸಂಚಾಲಕ ಶ್ರೀ. ಕಾ. ಶ್ರೀನಿವಾಸ್ ಅವರು ಮಾಹಿತಿ ಕೇಳಿದವರಿಗೆ ನಿಯಾಮಾನುಸಾರ ಮಾಹಿತಿ ಕೇಳುವ ಬದಲಿಗೆ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾ ಗೋಷ್ಠಿಯಲ್ಲಿ ಸೊ. ಶಿ. ಪ್ರಕಾಶ್ ರೈತ ಮುಖಂಡ ಕೆ. ಜಿ .ಉಮೇಶ್ ನಾಗರಾಜ್ ತೊರೆಶೆಟ್ಟಹಳ್ಳಿ, ಪ್ರಸನ್ನಕುಮಾರ್, ನ.ಲಿ.ಕೃಷ್ಣ, ಅಜ್ಜಹಳ್ಳಿ ಸಿದ್ದಾರ್ಥ, ಆತಗೂರು ಗ್ರಾ ಪಂ ಸದಸ್ಯ ಆಲಂಶೆಟ್ಟಹಳ್ಳಿ ಆಶೋಕ್, ಸಕ್ಕರೆ ನಾಗರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!