Thursday, November 19, 2026

ಪ್ರಾಯೋಗಿಕ ಆವೃತ್ತಿ

ಪಂಚರತ್ನ ಯೋಜನೆಗಾಗಿ ಕುಮಾರಸ್ವಾಮಿ ಗೆ ಅವಕಾಶ ಕೊಡಿ – ಹೆಚ್.ಡಿ.ದೇವೇಗೌಡ

ಪಂಚರತ್ನ ಯೋಜನೆಗಾಗಿ ಕುಮಾರಸ್ವಾಮಿ ಗೆ ಅವಕಾಶ ಕೊಡಿ. ನಿಮ್ಮೆಲ್ಲರಲ್ಲಿ ಕೈ ಮುಗಿದು ಕೇಳ್ತೇನೆ.
ಸುರೇಶ್ ಗೌಡರನ್ನ ಗೆಲ್ಲಿಸಿ, ಕುಮಾರಸ್ವಾಮಿ ಕೈ ಬಲ ಪಡಿಸಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮನವಿ ಮಾಡಿದರು.

ನಾಗಮಂಗಲದಲ್ಲಿ ಇಂದು ನಡೆದು ಜೆಡಿಎಸ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿಯವರು ಕಣ್ಣು ಕುಕ್ಕುವ ರೀತಿ ನಾಗಮಂಗಲದಲ್ಲಿ ರೋಡ್ ಶೋ ಮಾಡಿದ್ದೀರಿ, ಮಂಡ್ಯದಲ್ಲಿ ಮೋದಿ ರೋಡ್ ಶೋ ಮಾಡಿದ್ದಾರೆ. ಅದಕ್ಕಿಂತ ಮಿಗಿಲಾಗಿ ನಾಗಮಂಗಲದ ಮಹಾ ಜನತೆ ರೋಡ್ ಶೋ ನಡೆಸಿ.
ಅಕ್ಕತಂಗಿಯರು, ಜನರು ಸ್ವಾಗತಿಸಿದ್ದಾರೆ. ನಿಮಗೆ ತಾಲೆ ಭಾಗಿ ನಮಸ್ಕರಿಸುತ್ತೇನೆ ಎಂದರು.

ನಾಗಮಂಗಲ ಕೇಶವನಾರಾಯಣ ಸ್ವಾಮಿ ದೇವಸ್ಥಾನದ ಎದುರು ಸಣ್ಣ ಸಭೆ ಮಾಡಿದ್ದೆ‌. ನಾನು ನೋವಿನಿಂದ ಸಾಯ್ತಿದ್ದೇವೆ ನೀರು ಹರಿಸು ನಿನ್ನ ಹೆಸರಲ್ಲಿ ಜೀವನ ಮಾಡ್ತೇವೆ ಅಂದ್ರು. ಆ ಘಟನೆಯನ್ನ ಇನ್ನು ಮರೆಯಕ್ಕಾಗಲ್ಲ. ಕೆಲವರು ಬೆಂಗಳೂರಿಗೆ ಕೂಲಿಗೆ ಹೋದರು. ಮಹಾರಾಜರು ಅನ್ನ ತಂದು ಹಂಚುತ್ತಿದ್ದರು. ನಾಗಮಂಗಲಕ್ಕೆ ನೀರು ಹರಿಸುವ ಕೆಲಸ ಮಾಡಿದೆ‌. ಮಾತನಾಡುವವರಿಗೆ ನಾಲಿಗೆ ಎಲುಬು ಇಲ್ಲ, ಕುಮಾರಸ್ವಾಮಿ ಅವರು ರೈತರು ಸಾಲ ಮನ್ನಾ ಮಾಡಿದ್ರು. ರೈತರಿಗೆ ಹಣ ಹಾಕುವ ಯೋಜನೆ ಯಾರು ಮಾಡಿದ್ರು. ಪಂಚರತ್ನ ಯಾತ್ರೆ ಮೂಲಕ ಜನರಿಗೆ ಜನ ಪರ ಯೋಜನೆ. ನಾಗಮಂಗಲ ಇನ್ನು ಅನೇಕ ಕಾಲುವೆಗಳಿಗೆ ನೀರು ಹರಿಯುತ್ತಿಲ್ಲ. ನಾವು ಕನ್ನಡಿಗರು ನ್ಯಾಯವಾಗಿ ಹೋರಾಟ ಮಾಡ್ತೇವೆ ಎಂದರು.

ಇವತ್ತಿನ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದಿರಿ. ಮಹಿಳೆಯರಿಗೆ ಶಕ್ತಿ ಕೊಟ್ಟಿದ್ದು ಹರದನಹಳ್ಳಿಯ ದೇವೇಗೌಡ್ರು. ಮುಸ್ಲಿಂ ಸಮುದಾಯದವರನ್ನ ಯಾರು ಗುರ್ತಿಸಿಲ್ಲ. ರೈತನ ಮಗ ದೇವೇಗೌಡ್ರು ನಿಮ್ಮ ಮುಂದೆ ನಿಂತಿದ್ದೇನೆ. ಮೇ 10ರಂದು ನಂಬರ್ 5ಕ್ಕೆ ಮತ ಹಾಕಿ. ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಮಾಡಲು ಅವಕಾಶ ಕೊಡಿ. ಸುರೇಶ್ ಗೌಡರನ್ನ ಗೆಲ್ಲಿಸಿ ಗೆಲ್ಲಿಸಿ ಗೆಲ್ಲಿಸಿ ಎಂದು ಸುರೇಶ್ ಗೌಡ ಕೈ ಎತ್ತಿ ಜನರಲ್ಲಿ ಮನವಿ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ