ಅಗತ್ಯವಿರುವ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ರೆಡ್ ಕ್ರಾಸ್ ಸಂಸ್ಥೆ ಧ್ಯೇಯವಾಗಿದೆ ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಹೇಳಿದರು.
ಮಂಡ್ಯ ನಗರದಲ್ಲಿರುವ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಕಚೇರಿಯಲ್ಲಿ ನಡೆದ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಂಸ್ಥಾಪನಾ ದಿನಾಚರಣೆ ಮತ್ತು ಆರೋಗ್ಯ ಕಿಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಮತ್ತು ಅಗತ್ಯ ಉಳ್ಳವರಿಗೆ ಜೀವ-ಜೀವನ ರಕ್ಷಿಸಿಕೊಳ್ಳಲು ನೆರವಾಗುವುದು, ಆರೋಗ್ಯರಕ್ಷಣೆ, ವಿಕಲಚೇತನರ ಸಬಲೀಕರಣ, ನೇತ್ರ, ರಕ್ತದಾನಗಳಂತಹ ಸೇವಾ ಕಾರ್ಯಗಳನ್ನು ಸಮಾಜಕ್ಕೆ ಒದಗಿಸುವ ಸದುದ್ದೇಶದಿಂದ ರೆಡ್ ಕ್ರಾಸ್ ಸೇವೆ ಸಲ್ಲಿಸುತ್ತಿದೆ ಎಂದು ನುಡಿದರು.
ಇಂದು ಮೇ.8, ರೆಡ್ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವಾಗಿದೆ, ಈದಿನವನ್ನು ವಿಶ್ವಸಂಸ್ಥೆಯು ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನಾಗಿ ಆಚರರಿಸಲು ಘೋಷಿಸಿ, ವಿಶ್ವದ ಎಲ್ಲಾ ರಾಷ್ಟçಗಳಲ್ಲೂ ರೆಡ್ ಕ್ರಾಸ್ ಶಾಖೆಗಳಲ್ಲೂ ಆಚರಿಸಿ, ಸೇವಾಕಾರ್ಯಗಳೊಂದಿಗೆ ಸ್ಮರಿಸಲಾಗುತ್ತದೆ ಎಂದು ತಿಳಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ನಿರ್ದೇಶಕ ಕೆ.ಟಿ.ಹನುಮಂತು, ಎಲ್ಲಿ ಪ್ರಕೃತಿಯಿಂದ ಆದ ಆಪತ್ತುಗಳು, ಮಾನವ ಸೃಷ್ಠಿತ ಅವಘಟಗಳಿಂದ ಜೀವ ರಕ್ಷಿಸಲು, ಗಾಯಾಳುಗಳನ್ನು ಬದುಕಿಸಲು ರೆಡ್ ಕ್ರಾಸ್ ಸೇವೆಗೆ ನಿಲ್ಲುತ್ತದೆ, ಸ್ವಯಂ ಸೇವಕರು, ಶಾಖೆಯ ಮೂಲಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ನುಡಿದರು.
ಇದೇ ಸಂಧರ್ಭದಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ಕಿಟ್ಗಳನ್ನು ನೀಡಿ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕರಾದ ನಾರಾಯಣಸ್ವಾಮಿ, ಜವರೇಗೌಡ, ಷಡಕ್ಷರಿ, ಸಿದ್ದೇಗೌಡ, ಶಿವಲಿಂಗ ಮತ್ತಿತರರಿದ್ದರು.




