Thursday, November 19, 2026

ಪ್ರಾಯೋಗಿಕ ಆವೃತ್ತಿ

ಪತ್ರಿಕಾ ಸಂಪಾದಕರ ಮೇಲೆ ಹಲ್ಲೆಗೆ ಯತ್ನ : ಪೊಲೀಸರಿಗೆ ದೂರು

ಮತದಾರರಿಗೆ ಹಣ ಹಂಚುತ್ತಿರುವುದರ ಫೋಟೋ ತೆಗೆಯಲು ಮುಂದಾದ ಪತ್ರಿಕಾ ಸಂಪಾದಕರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಮದ್ದೂರು ಕೆಮ್ಮಣ್ಣು ನಾಲೆ ಬಳಿ ನಡೆದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿಂಷಾಪ್ರಭ ಕನ್ನಡ ದಿನಪತ್ರಿಕೆ  ಸಂಪಾದಕ ಗುರುಬಸವಯ್ಯ ಎಂಬುವರ ಮೇಲೆಯೇ ಹಲ್ಲೆಗೆ ಯತ್ನ ನಡೆದಿದ್ದು, ಈಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿ ಸಂಗ್ರಹ ಮಾಡಲು ಮದ್ದೂರು ಪಟ್ಟಣದ ರೌಂಡ್ಸ್ ನಲ್ಲಿದ್ದ ತಮ್ಮ ಕಣ್ಣಿಗೆ ಕೆಮ್ಮಣ್ಣು ನಾಲೆ ಬಳಿ ಕೆಲವು ಮುಸಲ್ಮಾನ್ ಮತದಾರರು ಮತ ಚಲಾವಣೆ ಮಾಡದೆ ನಿಂತಿರುವುದು ಕಂಡು ಬಂತು, ಅವರನ್ನು ಪ್ರಶ್ನೆ ಮಾಡಲಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉದಯ್ ಕಡೆಯವರು ಮತ ಹಾಕಲು ಕೆಲವರಿಗೆ ಹಣವನ್ನು ಕೊಟ್ಟಿದ್ದಾರೆ. ಆದರೆ ನಮಗೆ ನೀಡಿರುವುದಿಲ್ಲ, ನಮಗೂ ಹಣ ನೀಡುವವರೆಗೆ ನಾವು ಮತ ಚಲಾವಣೆ ಮಾಡುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಮತ್ತೊಂದು ಕಡೆ ಹಣ ಪಡೆಯಲು ಸರದಿ ಸಾಲಿನಲ್ಲಿ ಜನರು ನಿಂತಿದ್ದರೂ, ಅದರ ಫೋಟೋ ತೆಗೆಯಲು ಮುಂದಾದ ತಮ್ಮ ಮೇಲೆ ಕೆಲವು ವ್ಯಕ್ತಿಗಳು ಮೊಬೈಲ್ ಕಸಿದುಕೊಂಡು ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ