ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮಕ್ಕೆ ಮಧ್ಯರಾತ್ರಿಯಲ್ಲಿ ಬಂದ ಪುಟ್ಟ ಕಂದಮ್ಮ ನಿಹಾಲ್ ಮತ್ತು ಆತನ ಅಜ್ಜಿ ಲೀಲಾವತಿ ಅವರ ಮೃತದೇಹಗಳನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ತಡರಾತ್ರಿಯಲ್ಲಿ ಮೃತರ ಕುಟುಂಬಸ್ಥರಿಂದ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕತ್ತರಘಟ್ಟ ಗ್ರಾಮದ ಲೀಲಾವತಿ (55), ಎರಡೂವರೆ ವರ್ಷದ ನಿಹಾಲ್ ಇಬ್ಬರು ಕೂಡ ಕೇರಳದ ವಯನಾಡುವಿನಲ್ಲಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ಅಸುನೀಗಿದ್ದರು.
ಗಣ್ಯರಿಂದ ಕಂಬನಿ
ಮೃತರಿಗೆ ಶಾಸಕ ಎಚ್ ಟಿ ಮಂಜುನಾಥ್ ಸೇರಿದಂತೆ ಮಾಜಿ ಸಚಿವ ಕೆ.ಸಿ ನಾರಾಯಣಗೌಡ, ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್, ಉಪವಿಭಾಗ ಅಧಿಕಾರಿ ನಂದೀಶ್, ತಹಸಿಲ್ದಾರ್ ನಿಸರ್ಗಪ್ರಿಯ, ರಾಜಶ್ವನಿರೀಕ್ಷಕ ಜ್ಞಾನೇಶ್, ಗ್ರಾ. ಪಂ ಸದಸ್ಯ ಪರಮೇಶ್, ಉಪನ್ಯಾಸಕ ವಾಸು, ಕಾಯಿ ಮಹೇಶ್ ಕಂಪನಿ ಮಿಡಿದಿದ್ದಾರೆ.