ಮಂಡ್ಯನಗರದ ಚಿಕ್ಕಮಂಡ್ಯ ಕೆರೆಯಂಗಳದ ಬೀಡಿ ಕಾರ್ಮಿಕರ ಕಾಲೋನಿಯ ಬೀದಿ ದೀಪಗಳನ್ನು ಶಾಸಕರಾದ 24 ಗಂಟೆಯೊಳಗೆ ನೂತನ ಶಾಸಕ ರವಿಕುಮಾರ್ ಗಣಿಗ ದುರಸ್ತಿ ಮಾಡಿಸಿ ಗಮನ ಸೆಳೆದಿದ್ದಾರೆ.

ಈ ಹಿಂದೆ ಕಾಲೋನಿ ಸಮಸ್ಯೆ ಬಗ್ಗೆ ಅಲ್ಲಿನ ನಿವಾಸಿಗಳು ಗಮನ ಸೆಳೆದಾಗ ‘ನಾನು ಶಾಸಕನಾದ 24 ಗಂಟೆಯೊಳಗೆ ಬೀದಿ ದೀಪ ಸರಿಪಡಿಸುತ್ತೇನೆಂದು ಭರವಸೆ ನೀಡಿದ್ದೆ. ಅದರಂತೆ ಇಂದು ಬೀದಿ ದೀಪಗಳನ್ನು ಸರಿಪಡಿಸಿದ್ದೇನೆಂದು ತಮ್ಮ ಪೇಸ್ ಬುಕ್ ನಲ್ಲಿ ಶಾಸಕರು ಬರೆದುಕೊಂಡಿದ್ಧಾರೆ.




