Friday, November 20, 2026

ಪ್ರಾಯೋಗಿಕ ಆವೃತ್ತಿ

ವಿಜೃಂಭಣೆಯಿಂದ ನಡೆದ ಮದ್ದೂರಮ್ಮ ಸಿಡಿ ಉತ್ಸವ

ವರದಿ : ನ.ಲಿ.ಕೃಷ್ಣ, ಸಾಮಾಜಿಕ ಕಾರ್ಯಕರ್ತರು

ಮದ್ದೂರಮ್ಮನ ಕೊಂಡೋತ್ಸವದ ಮರುದಿನ ಜರುಗುವ ಸಿಡಿ ಸಂಭ್ರಮ ಇಂದು ಸಂಜೆ ಭಕ್ತರ ಸಡಗರ ಉದ್ಘೋಷದ ನಡುವೆ ವಿಜೃಂಭಣೆಯಿಂದ ನಡೆಯಿತು.

ಮದ್ದೂರಮ್ಮನವರ ಸಾಕು ಮಗ ಸಿಡಿರಣ್ಣ ಅವರ ಅಲಂಕೃತ ಮೂರ್ತಿಯನ್ನು ಸಿಡಿ ಕಂಬಕ್ಕೆ ಸೇರಿಸಿ ಮೂರು ಪ್ರದಕ್ಷಿಣೆ ಬರಲಾಯಿತು.

ಈ ವೇಳೆ ಮದ್ದೂರಮ್ಮನವರ ಪಟವು ಜೊತೆಗಿದ್ದು ಸಿಡಿಯ ಮೆರಗು ಹೆಚ್ಚಿಸಿತು. ಸಿಡಿರಣ್ಣನತ್ತ ಭಕ್ತರು ಹಣ್ಣು ಧವನ ಎಸೆದು ಭಕ್ತಿಭಾವ ಮೆರೆದು ಪುನೀತರಾದರು. ಮದ್ದೂರಮ್ಮನವರ ಮಠ ಮನೆಯಿಂದ ಹೊರಟ ಉತ್ಸವ ಪೇಟೆ ಬೀದಿಯ ಮೂಲಕ ಸಾಗಿ ದೊಡ್ಡಿರಸ್ತೆಯ ಮೂಲಕ ಮದ್ದೂರಮ್ಮನವರ ದೇವಾಲಯದ ಅಂಗಳವನ್ನು ಸಂಜೆ 4.30 ಕ್ಕೆ ತಲುಪಿತು. ಸಿಡಿರಣ್ಣನ ಉತ್ಸವ ಕಣ್ತುಂಬಿಕೊಳ್ಳಲು ಭಕ್ತರ ದಂಡೇ ನೆರದಿತ್ತು.

ಮದ್ದೂರು ಪಟ್ಟಣ ಹಾಗೂ ಬೆಂಗಳೂರು – ಮೈಸೂರು ಹೆದ್ದಾರಿಯ ತುಂಬೆಲ್ಲಾ ಭಕ್ತರು ನೆರೆದು ಸಿಡಿ ಉತ್ಸವದ ಭಕ್ತಿ ಭಾವದಲ್ಲಿ ಮಿಂದೆದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ