Thursday, November 19, 2026

ಪ್ರಾಯೋಗಿಕ ಆವೃತ್ತಿ

ಚುನಾವಣಾ ಸೋಲು : ಬಿಜೆಪಿ ಆತ್ಮಾವಲೋಕನ ಸಭೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ್‌ ಜಯರಾಂ ನೇತೃತ್ವದಲ್ಲಿ ಮಂಡ್ಯ ನಗರದಲ್ಲಿ ಮತದಾರರಿಗೆ ಕೃತಜ್ಞತೆ ಮತ್ತು ಸೋಲಿನ ಆತ್ಮಾವಲೋಕನ ಸಭೆ ನಡೆಯಿತು.

ಸಭೆಯಲ್ಲಿ ಅಶೋಕ್‌ ಜಯರಾಂ ಮಾತನಾಡಿ, ರಾಜಕೀಯವಾಗಿ ನನ್ನ ತಂದೆ ಎಸ್.ಡಿ.ಜಯರಾಂ ಅವರು ಜನರ ಮನಸಲ್ಲಿ ಇಂದಿಗೂ ಇದ್ದಾರೆ, ಆ ಜನರ ಆಶೀರ್ವಾದದಿಂದಲೇ ಇಷ್ಟೊಂದು ಮತಗಳನ್ನು ಪಡೆಯಲು ಸಾಧ್ಯವಾಯಿತು. ಕೇಂದ್ರದಲ್ಲಿ ಮೋದಿ ಅವರ ಆಡಳಿತ ನೋಡಿ ಜನರು ಆಶೀರ್ವಾದ ಮಾಡಿರುವುದನ್ನು ಮರೆಯುವಂತಿಲ್ಲ, ಈ ಚುನಾವಣೆಗೆ ಅವಕಾಶ ಮಾಡಿಕೊಟ್ಟ ಹಾಗೂ ಮತ ನೀಡಿದವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಫಲಿತಾಂಶದ ಬಗ್ಗೆ ನಾನು ಏನನ್ನೂ ಹೇಳಲ್ಲ, ಚುನಾವಣೆಯ ಅನುಭವದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಿಂದಲೂ ನಾವು ಮುಂದಿದ್ದೇವೆ, ಪ್ರತಿಯೊಂದು ಬೂತ್‌ ಮಟ್ಟದಲ್ಲಿ ಮತದಾರರನ್ನು ಪರಿಪೂರ್ಣವಾಗಿ ತಲುಪಲು ಸಾಧ್ಯವಾಗಲಿಲ್ಲ, ಮುಂದಿನ ದಿನಗಳಲ್ಲಿ ನಮ್ಮೆಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡು ಜನರ ನಡುವೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ಮುಖಂಡ ವಸಂತ್‌ ಕುಮಾರ್ ಮಾತನಾಡಿ, ಶಕ್ತಿ ಕೇಂದ್ರದ ಜವಾಬ್ದಾರಿ ಹೆಚ್ಚಿತ್ತು, ಅದನ್ನು ನಿಭಾಯಿಸಿದ್ದೀರಾ, ಆದರೆ ಅದು ಪರಿಪೂರ್ಣವಾಗಿ ಆಗಬೇಕು ಎಂದರು.

ಸಭೆಯಲ್ಲಿ ಬಿಜೆಪಿ ಮಂಡ್ಯ ನಗರಾಧ್ಯಕ್ಷ ವಿವೇಕ್‌, ಗ್ರಾಮಾಂತರ ಅಧ್ಯಕ್ಷೆ ಸುಜಾತಾ ರಮೇಶ್‌, ನಗರಸಭೆ ಸದಸ್ಯ ಅರುಣ್‌ಕುಮಾರ್, ಬೇಲೂರು ಸೋಮಶೇಖರ್, ಕಾರಸವಾಡಿ ಮಹದೇವು, ಅರವಿಂದ್, ಪ್ರಸನ್ನ, ಚಂದ್ರು ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ