ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳ 233 ಗ್ರಾಮ ಪಂಚಾಯಿತಿಗಳ 2ನೇ ಅವಧಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಗೊಳಿಸಲು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.
ಈ 2020ರ ಡಿಸೆಂಬರ್ ನಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಜನವರಿ 2021ರ ಮಾಹೆಯಲ್ಲಿ ಮೊದಲನೆ ಅವಧಿಗೆ ನಿಗಧಿಪಡಿಸಲಾಗಿತ್ತು. ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅವಧಿಯನ್ನು 30 ತಿಂಗಳಿಗೆ ಮಿತಿಗೊಳಿಸಿದ್ದು, ಮುಂದಿನ 30 ತಿಂಗಳ 2ನೇ ಅವಧಿಗೆ ಮೀಸಲಾತಿಯನ್ನು ನಿಗಧಿಪಡಿಸಲು ಆಯಾ ತಾಲ್ಲೂಕುನಲ್ಲಿ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಸಭೆ
ಮಂಡ್ಯ ತಾಲ್ಲೂಕಿನ ಗ್ರಾ.ಪಂ.ಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ನಿಗಧಿಗೆ ಸಂಬಂಧಿಸಿದಂತೆ ಜೂನ್ 12ರ ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ಭವನ ನಡೆಯಲಿದೆ
- ಮದ್ದೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಜೂನ್ 14ರ ಬೆಳಿಗ್ಗೆ 11 ಗಂಟೆಗೆ ಸಂಜಯ ಚಿತ್ರಮಂದಿರದಲ್ಲಿ ಸಭೆ
- ಮಳವಳ್ಳಿ ತಾಲ್ಲೂಕಿಗೆ ಸಂಬಂಧಿಸಿದಂತೆ ಜೂನ್ 14ರ ಮಧ್ಯಾಹ್ನ 3.30 ಗಂಟೆಗೆ ಮಹಾಲಕ್ಷ್ಮಿ ಚಿತ್ರಮಂದಿರದಲ್ಲಿ ಸಭೆ
- ಶ್ರೀರಂಗಪಟ್ಟಣ ತಾಲ್ಲೂಕಿಗೆ ಸಂಬಂಧಿಸಿದಂತೆ ಜೂನ್ 15ರ ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಚಿತ್ರಮಂದಿರದಲ್ಲಿ ಸಭೆ
- ಪಾಂಡವಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ಜೂನ್ 15ರ ಮಧ್ಯಾಹ್ನ 3.30 ಗಂಟೆಗೆ ಲಾಲ್ ಬಹುದ್ದೂರ್ ಶಾಸ್ತ್ರಿ ಚಿತ್ರಮಂದಿರದಲ್ಲಿ ಸಭೆ
- ನಾಗಮಂಗಲ ತಾಲ್ಲೂಕಿಗೆ ಸಂಬಂಧಿಸಿದಂತೆ ಜೂನ್ 17ರ ಬೆಳಿಗ್ಗೆ 11 ಗಂಟೆಗೆ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಸಭೆ
- ಕೆ.ಆರ್.ಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ಜೂನ್ 17ರ ಮಧ್ಯಾಹ್ನ 3.30 ಗಂಟೆಗೆ ಬಸವೇಶ್ವರ ಚಿತ್ರಮಂದಿರದಲ್ಲಿ ಮೀಸಲಾತಿ ನಿಗದಿ ಕುರಿತು ಸಭೆ ನಡೆಯಲಿದೆ.




