ಸಂಘಟಿತರಾಗಿದ್ದಲಿ ಶಕ್ತಿ ಬರುತ್ತದೆ, ಸೇವಾ ಚಟುವಟಿಕೆ ನಡೆಸಲು ಪ್ರೇರಣಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಹೇಳಿದರು.
ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಟ್ಟಡ ಸಮೀಪ ನೂತನವಾಗಿ ಆರಂಭಗೊಂಡ ಜಿಲ್ಲಾ ಹಿರಿಯ ನಾಗರೀಕರ ಕ್ಷೇಮಾಭಿವೃದ್ದಿ ಸಂಘದ ಕಚೇರಿ ಅವರು ಮಾತನಾಡಿದರು.
ಹಲವಾರು ಸಂಘ-ಸಂಸ್ಥೆಗಳು ಇದ್ದೇ ಇರುತ್ತವೆ, ನೌರರರ ಸಂಘ, ಅಧಿಕಾರಿಗಳ ಸಂಘ,ಯುವಕರು ಸಂಘಕಟ್ಟಿಕೊಂಡಿರುತ್ತಾರೆ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿಕ್ಕೆ ಸಂಘಟಿತರಾಗಿ ಸಂಘ ಸಂಸ್ಥೆಗಳನ್ನು ರಚಿಸಿಕೊಂಡಿರುತ್ತಾರೆ, ಅದರಂತೆಯೇ ಹಿರಿಯ ನಾಗಿರೀಕರು ಕ್ಷೇಮಕ್ಕಾಗಿ ಸಂಘ ಕಟ್ಟಿದ್ದೀರಿ ಎಂದು ನುಡಿದರು.
ಹಿರಿಯ ನಾಗರೀಕರು ಅಂದ ಮೇಲೆ ಸಾಕಷ್ಟು ಸಮಸ್ಯೆಗಳು ಬರುತ್ತವೆ, ಜಿಲ್ಲೆಯಲ್ಲಿನ ಎಲ್ಲಾ ಹಿರಿಯರು ಸೇರಿ ಸಂಘ ಮಾಡಿದ್ದೀರ, 60-65 ವರ್ಷ ತುಂಬಿದ ಹಿರಿಯ ನಾಗರೀಕರು ಸರ್ಕಾರಿ ಸೇವೆಯಿಂದ ನಿವೃತ್ತಿ ಕೊಂಡಿರುತ್ತಾರೆ, ವಿವಿಧ ಸಂಘ ಸಂಸ್ಥೆಗಳ ಸೇವೆಯಿಂದ ನಿವೃತ್ತಿಗೊಂಡು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹಲವು ಸಂದರ್ಭಗಳಲ್ಲಿ ಹಿರಿಯ ನಾಗರೀಕರಿಗೆ ತೊಂದರೆ ಆಗುತ್ತಿರಬಹುದು, ಇಲಾಖೆಗಳಿಲ್ಲಿ ಪಿಂಚಿಣಿ, ಆರೋಗ್ಯ ಭತ್ಯೆಗೆ ತೊಂದರೆಯಾಗಿರುವುದನ್ನು ಪರಿಹಾರ ಕಂಡುಕೊಳ್ಳಲು ಕ್ಷೇಮ ಸಂಘಗಳಿಂದ ನೆರವು ಪಡೆಯುವುದು ಅಗತ್ಯ ಎಂದು ಸಲಹೆ ನೀಡಿದರು.
ಜೂ.21ರಂದು ಕೆ.ಆರ್.ಎಸ್ ಆವರಣದಲ್ಲಿ ವಿಶ್ವ ಯೋಗದಿನಾಚಣೆ ಆಯೋಜಿಸಿದ್ದೆ ತಾವು ಬಂದು ಆರೋಗ್ಯ, ಯೋಗಗಳ ಮಾಹಿತಿ ಪಡೆದು ಕಾರ್ಯಕ್ರಮ ಯಶಸ್ಸಿಗೆ ನೆರವಾಗಬೇಕು ಎಂದು ತಿಳಿಸಿದರು. ಇದೇ ಸಂಧರ್ಭದಲ್ಲಿ ನಿವೃತ್ತಿಗೊಂಡು ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಗಣ್ಯರು ಅಭಿನಂದಿಸಿದರು. ಸಹಿ ವಿತರಣೆ ಕಾರ್ಯ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ನಾಗರೀಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಡಿ.ಎಂ.ಚಿಕ್ಕುಚ್ಚಯ್ಯ, ಉಪಾಧ್ಯಕ್ಷರಾದ ಎಂ.ಎಸ್.ನಾಗರಾಜು, ಶ್ರೀನಿವಾಸ್, ಕಾರ್ಯದರ್ಶಿ ಚಿಕ್ಕಸಿದ್ದೇಗೌಡ, ಸಹಕಾರ್ಯದರ್ಶಿ ನಿಂಗೇಗೌಡ, ಖಜಾಂಚಿ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಚಿಕ್ಕನಾಗೇಗೌಡ, ಪದಾಧಿಕಾರಿಗಳಾದ ಕೃಷ್ಣೇಗೌಡ, ಸಿದ್ದೇಗೌಡ, ಕೃಷ್ಣಪ್ಪ, ಶಿವಲಿಂಗಯ್ಯ, ಮಾದೇಗೌಡ, ನಾಗರಾಜು, ಚಿಕ್ಕಚನ್ನಯ್ಯ ಸತ್ಯಾನಂದಸ್ವಾಮಿ, ಡಾ.ಮರೀಗೌಡ ಮತ್ತಿತರರಿದ್ದರು.




