Wednesday, November 18, 2026

ಪ್ರಾಯೋಗಿಕ ಆವೃತ್ತಿ

ಜೂ.21ಕ್ಕೆ ಭಾರತೀನಗರದಲ್ಲಿ ವಿಶ್ವ ಯೋಗ ದಿನ ಆಚರಣೆ

ರೋಗ ಮುಕ್ತ ನವ ಸಮಾಜವನ್ನು ನಿರ್ಮಿಸಲು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಜೀವನ ಕಲೆಯಾದ ಯೋಗವನ್ನು ಅರ್ಥ ಪೂರ್ಣವಾಗಿಸಲು ಜೂನ್ 21ರಂದು ಬುಧವಾರ ಬೆಳಿಗ್ಗೆ6.30ಕ್ಕೆ ಭಾರತಿ ನಗರದ ಜನನಿ ಎಜುಕೇಶನ್ ಸೊಸೈಟಿ ಆವರಣದಲ್ಲಿ 9ನೇ ವಿಶ್ವ ಯೋಗ ದಿನಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಯೋಗ ಗುರು ಡಾ.ಎಂ.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.

ಭಾರತೀನಗರದ ಜನನಿ ವಿದ್ಯಾಸಂಸ್ಥೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರಾಂತ ಯೋಗ ಗುರುಗಳಾದ ಪ್ರಕಾಶ್ ಯೋಗಿ ಮತ್ತು ಪ್ರಸಾದ್ ಯೋಗಿಯವರ ಆಶೀರ್ವಾದಗಳೊಂದಿಗೆ ಜನನಿ ವಿದ್ಯಾಸಂಸ್ಥೆ, ಕನ್ನಡ ಸಂಘ, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ, ಪ್ರಜಾಪ್ರಿಯ ಆಸರೆ ಟ್ರಸ್ಟ್, ಸಮಾನ ಮನಸ್ಕರ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪತಂಜಲಿ ಟ್ರಸ್ಟ್ ಯೋಗ ರತ್ನ ಡಾ.ಎಂ ಮಲ್ಲಿಕಾರ್ಜುನ ಸ್ವಾಮಿ ಮಾರ್ಗದರ್ಶನದಲ್ಲಿ ಯೋಗದಿನವನ್ನು ಸುಮಾರು 600 ಕ್ಕೂ ಹೆಚ್ಚು ಯೋಗಪಟುಗಳ ಸಮ್ಮುಖದಲ್ಲಿಆಚರಿಸಲಾಗುವುದು ಎಂದರು.

ಜನನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಕೆ ಜಗದೀಶ್ ಮಾತನಾಡಿ, ಜನನಿ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಉದಯ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಭಾರತೀ ಕಾಲೇಜು ಕಾರ್ಯದರ್ಶಿ ಬಿ.ಎಂ ನಂಜೇಗೌಡರು ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕಿ ರಾಗಿಣಿ, ಜಿ.ಪಂ. ಮಾಜಿ ಸದಸ್ಯ ರಾಜೀವ್ ಸೇರಿದಂತೆ ಇತರರ ಆಗಮಿಸುವರು ಎಂದರು.

ಯೋಗ ದಿನವನ್ನು ಅರ್ಥಪೂರ್ಣವಾಗಿಸಲು ನನ್ನೆಲ್ಲ ಆಸಕ್ತ ಯೋಗ ಬಂದುಗಳು ವಿದ್ಯಾರ್ಥಿಗಳು ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದರು. ಯೋಗ ದಿನಕ್ಕೆ ಬರುವವರು ಬಿಳಿ ಸಮವಸ್ತ್ರ ಧರಿಸಿ ಬೆಳಗ್ಗೆ 6.30 ಗಂಟೆಗೆ ಯೋಗ ಮ್ಯಾಟ್ ನೊಂದಿಗೆ ಆಗಮಿಸಬೇಕೆಂದು ತಿಳಿಸಿದರು.

ಅರ್ಥಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಬಿ.ಎಸ್ ಬೋರೇಗೌಡ ಮಾತನಾಡಿ, ಪ್ರಪಂಚಕ್ಕೆ ಯೋಗವನ್ನು ಪರಿಚಯ ಮಾಡಿಕೊಟ್ಟ ಪ್ರಧಾನಿ ನರೇಂದ್ರಮೋದಿ ಅವರಿಗೆ ಸಲ್ಲುತ್ತದೆ ಎಂದರು.

ಜನನಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿರುವ ಯೋಗ ದಿನಾಚರಣೆ ಕಾರ್ಯಕ್ರಮ ನಿಜಕ್ಕೂ ಸಂತಸದ ವಿಷಯ, ಸಮಸ್ತ ನಾಗರೀಕ ಬಂಧುಗಳಿಗೆ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ