Friday, November 20, 2026

ಪ್ರಾಯೋಗಿಕ ಆವೃತ್ತಿ

ರೈತರ ಜೀವನಾಡಿ ಮೈಶುಗರ್ ಕಾರ್ಯಾರಂಭಕ್ಕೆ ಸಜ್ಜು ; ಬಾಯ್ಲರ್ ಗೆ ಅಗ್ನಿ ಸ್ಪರ್ಶ

ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಮೈಶುಗರ್ ಪುನಶ್ಚೇತನಕ್ಕೆ ಸರ್ಕಾರ ನೆರವು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹಾಗೂ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ಅವರು ಕಬ್ಬು ನುರಿಯುವ ಬಾಯ್ಲರ್ ಅಗ್ನಿ ನೀಡುವ ಮೂಲಕ ಚಾಲನೆ ನೀಡಿದರು.

ಜಾಹೀರಾತು

ಮೈಶುಗರ್ ಆವರಣದಲ್ಲಿ ವಿಶೇಷ ಪೂಜೆ ನಡೆಸಿ, ಮೈಶುಗರ್ ಕಾರ್ಖಾನೆ ಆರಂಭಕ್ಕೆ ಅಡೆತಡೆಗಳು ಎದುರಾಗದಂತೆ ಪ್ರಾರ್ಥನೆ ಮಾಡಿದರು.

ನಂತರ ಮಾತನಾಡಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು, ಮಂಡ್ಯ ಜಿಲ್ಲೆಯ ರೈತರ ಅಭಿವೃದ್ಧಿಗಾಗಿ ಮೈಶುಗರ್ ಸಕ್ಕರೆ  ಕಾರ್ಖಾನೆಗೆ ಸರ್ಕಾರ ಮೊದಲ ಅನುದಾನ ನೀಡಿದೆ. ಇದಕ್ಕೆ ಮಂಡ್ಯ ಜಿಲ್ಲೆಯ ರೈತರ ಪರವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮೈಶುಗರ್ ಪುನರಾರಂಭಿಸಲು ₹ 50 ಕೋಟಿ ಬಿಡುಗಡೆಯಾಗಿದೆ. ಯಾವುದೇ ಸಮಸ್ಯೆ ಬರದಂತೆ ಕಾರ್ಖಾನೆ ನಡೆಯಲಿದ್ದು, ಜೂನ್ ಅಂತ್ಯದಲ್ಲಿ ಕಬ್ಬು ನುರಿಯುವ ಕಾರ್ಯ ಆರಂಭವಾಗಲಿದೆ ಎಂದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿ. ಕಾರ್ಖಾನೆಗೆ ಬೇಕಾದ ಕಬ್ಬುನ್ನು ರೈತರು ಕೊಡಬೇಕು. ಹಣ ನೀಡುವ ಜವಾಬ್ದಾರಿ ನಮ್ಮದು. ಇತರೆ ಫ್ಯಾಕ್ಟರಿಗಳಲ್ಲಿ ಕೊಡುವ ಬೆಲೆಯನ್ನೇ ನಾವು ಕೊಡ್ತೀವಿ. ಸಂಪೂರ್ಣ ವಿಶ್ವಾಸ ಇಟ್ಟು ಕಾರ್ಖಾನೆಗೆ ಕಬ್ಬು ನೀಡಿ ಎಂದರು.

ಕಳೆದ ವರ್ಷ ಕಡಿಮೆ ಕಬ್ಬು ನುರಿಸಿರುವುದರಿಂದ ನಷ್ಟ ಆಗಿದೆ. ಈ ವರ್ಷ ಹೆಚ್ಚು ಕಬ್ಬು ನುರಿದರೆ  ನಷ್ಟ ತಡೆಯಬಹುದು. ಮೈಶುಗರ್ ಕಾರ್ಖಾನೆಯಲ್ಲಿ ಕೆಲ ಸಮಸ್ಯೆಗಳಿವೆ ಅದನ್ನ ಬಗೆಹರಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ರಮೇಶ್ ಬಾಬು ಬಂಡಿಸಿದ್ದೇಗೌಡ, ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪಾಟಿಲ್ ಅಪ್ಪಸಾಹೇಬ್, ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ, ಜಿ.ಪಂ. ಸಿಇಓ ಶೇಕ್ ತನ್ವೀರ್ ಆಸೀಫ್, ಎಸ್ಪಿ ಎನ್.ಯತೀಶ್ ಸೇರಿದಂತೆ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ