Thursday, September 19, 2024

ಪ್ರಾಯೋಗಿಕ ಆವೃತ್ತಿ

ಯಾವುದು ಪ್ರೇಮ?

✍️ ಆನಂದಿ_ಕಲರ್_ಪದ್ಯಗಳು
     ಚಿದಂಬರ ನರೇಂದ್ರ

ತಮ್ಮ ಸಂಬಂಧದ ಅಗಾಧತೆಯ
ಒಂದು ಉನ್ಮತ್ತ ಕ್ಷಣದಲ್ಲಿ ಅವನು
ಪ್ರಶ್ನೆ ಮಾಡಿದ ;

ಯಾವುದು ಪ್ರೇಮ?
ಹಾಸಿಗೆಯೊಳಗಿನ ಕೋಲಾಹಲವಾ?
ಅಥವಾ ರವಿವಾರ ಸಂಜೆ
ನಾವಿಬ್ಬರೂ ಕೈ ಕೈ ಹಿಡಿದುಕೊಂಡು
ಸಮುದ್ರದ ದಂಡೆಯಲ್ಲಿ
ಪ್ರಶಾಂತವಾಗಿ ಹೆಜ್ಜೆ ಹಾಕಿದ್ದು ?

ಹೌದು
ಹಾಸಿಗೆಯಲ್ಲಿ ನೀನು ಅಕ್ಕರೆಯಿಂದ
ನನ್ನ ಬೆವರು ಒರೆಸಿ ದೀಪ ಹಚ್ಚಿದ ಬೆರಗು,
ಮತ್ತು ಸಮುದ್ರದ ದಂಡೆಯಲ್ಲಿನ ನಮ್ಮ
ಸಂಕೋಚದ ವಿಜೃಂಭಣೆಯಿಂದ
ಉತ್ತೇಜಿತನಾಗಿ ಸೂರ್ಯ
ಆಕಾಶದ ಜೊತೆ ಓಕಳಿಯಾಡಿದ
ಸಹಜತೆ,

ಎರಡೂ ಪ್ರೇಮದ ಉದಾಹರಣೆಗಳೇ,
ಅವಳು ಸಮಾಧಾನ ಹೇಳಿದಳು
ಅವನ ಉತ್ಕಟತೆಗೆ,

ಬೆತ್ತಲಾಗಿ
ನಾವು ಮಾಡಿದ್ದೆಲ್ಲ ಪ್ರೇಮ,
ಎಲ್ಲವೂ ಅಧ್ಯಾತ್ಮ !

~ In collaboration with Márquez

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!