Thursday, November 19, 2026

ಪ್ರಾಯೋಗಿಕ ಆವೃತ್ತಿ

ಫಾರ್ಮಸಿಸ್ಟರ ಪಾತ್ರ ಮಹತ್ವದ್ದು : ವಿನಯ್

ಪ್ರಸ್ತುತ ದಿನಗಳಲ್ಲಿ ಔಷಧಗಳನ್ನು ಹೇಗೆ ಬಳಸಬೇಕು, ಯಾವ ರೋಗಕ್ಕೆ ಯಾವುದು ರೋಗನಿರೋಧಕ ಶಕ್ತಿಯಾಗಿ ಪ್ರಜೋಜನಕಾರಿಯಾಗಿದೆ ಎಂಬುದರ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕಿದೆ, ಸಮಾಜದಲ್ಲಿ ಫಾರ್ಮಸಿಸ್ಟರ ಪಾತ್ರ ಮಹತ್ವದ್ದು ಎಂದು ಅಭಿನವ ಭಾರತಿ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲ ಡಾ.ಸಿ.ಎಚ್.ವಿನಯ್ ಹೇಳಿದರು.

ಮಂಡ್ಯ ನಗರದ ಜೆಸಿ ವೃತ್ತದಲ್ಲಿ ಅಭಿನವ ಭಾರತಿ ಕಾಲೇಜ್ ಆಫ್ ಫಾರ್ಮಸಿ ಆಯೋಜಿಸಿದ್ದ ವಿಶ್ವ ಔಷಧ ತಜ್ಞರ ದಿನ ಪ್ರಯುಕ್ತ ಔಷಧ ಜಾಗೃತಿ ಅಭಿಯಾನ-ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಗತ್ತಿನಲ್ಲಿ ಫಾರ್ಮಸಿಸ್ಟರ ಕರ್ತವ್ಯ ಹಾಗೂ ಅವರ ಪಾತ್ರ ತುಂಬಾನೆ ಮಹತ್ವದ್ದಾಗಿದೆ, ಪ್ರತಿಯೊಂದು ಔಷಧಿಯನ್ನು ಅವರು ಸೂಕ್ತವಾಗಿ ಬಳಸುತ್ತಾರೆ. ಫಾರ್ಮಸಿಸ್ಟರ ಕರ್ತವ್ಯಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಜಾಗೃತಿ ಅಭಿಯಾನಕ್ಕೆ ನಗರದ ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್‌ಐ ಮಾದೇಶ್ ಚಾಲನೆ ನೀಡಿದರು. ಫಾರ್ಮಸಿ ವಿದ್ಯಾರ್ಥಿ ಸಮೂಹ ರೋಗಗಳಿಗೆ ಔಷಧಗಳ ಪಾತ್ರ ಕುರಿತು ಬೀದಿನಾಟಕ ಪ್ರದರ್ಶನ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ