ಪ್ರಾಚೀನ ಕಾಲದಲ್ಲಿ ಸಮರ ಕಲೆಯಾಗಿದ್ದ ಕರಾಟೆಯು ಇಂದು ಆತ್ಮರಕ್ಷಣೆಯ ಕೌಶಲ್ಯಕಲೆಯಾಗಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ಮಂಡ್ಯ ನಗರದ ಬಾಲಭವನದಲ್ಲಿ ವಿಷ್ಣು ಲಯನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್, ಗೋಜು ರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ ಆಯೋಜಿಸಿದ್ದ ವಿಶ್ವ ಕರಾಟೆ ದಿನಾಚರಣೆ ಪ್ರಯುಕ್ತ ಕರಾಟೆ ಪ್ರದರ್ಶನ ಹಾಗೂ ಕರಾಟೆ ಕಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿಅವರು ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಕರಾಟೆ ಪ್ರಪಂಚದಾದ್ಯಂತ ಜನಪ್ರಿಯ ಸ್ವ ರಕ್ಷಣಾತ್ಮಕ ಕಲೆಯಾಗಿದೆ. ಯಾರೊಬ್ಬರೂ ನೋವು ಅಥವಾ ಆಕ್ರಮಣವನ್ನು ಅನುಭವಿಸದಂತೆ ಒಬ್ಬರ ಸ್ವಂತ ದೇಹವನ್ನು ಕಲ್ಲಿನಂತೆ ಬಲಪಡಿಸುವುದು ಇದರ ಮುಖ್ಯ ಗುರಿಯಾಗಿದೆ. ಗುದ್ದುವುದು, ಒದೆಯುವುದು, ಮೊಣಕೈಯಲ್ಲಿ ಹೊಡೆಯುವುದು ಮತ್ತು ಮೊಣಕಾಲಿನ ಮೇಲೆ ಹೊಡೆಯುವುದು ಇದರ ಮುಖ್ಯ ತಂತ್ರಗಳು. ಕರಾಟೆ ಕಲಿಕೆಗೆ ತರಬೇತಿ ಅತ್ಯಗತ್ಯ ಎಂದು ನುಡಿದರು.
ಕರಾಟೆಯನ್ನು ಜಪಾನ್‌ನ ಓಕಿನಾವಾದಲ್ಲಿ ಕಂಡುಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ, ಎರಡು ಪದಗಳಿಂದ ಜೋಡಿಸಲ್ಪಟ್ಟು ‘ಕಾರ’ ಎಂದರೆ ‘ಖಾಲಿ’ ಮತ್ತು ‘ತೆ’ ಎಂದರೆ ‘ಕೈ’, ಅಂದರೆ ‘ಖಾಲಿ ಕೈ’. ಇದರ ಮುಂದೆ ಜಪಾನಿನ ಜನರು ‘ಮಾಡು’ ಎಂಬ ಪದವನ್ನು ಸೇರಿಸಿದ್ದಾರೆ, ನಂತರ ಅದು ‘ಕರಾಟೆ-ಡು’ ಆಗಿದೆ, ಕರಾಟೆ ಅಂದರೆ ‘ಸಂಪೂರ್ಣ ಜೀವನ ವಿಧಾನ’ ಎಂಬರ್ಥವನ್ನು ನೀಡುತ್ತದೆ ಎಂದು ವಿವರಿಸಿದರು.
ಕರಾಟೆ ತರಬೇತುದಾರ ಲೋಕೇಶ್ ಮೊದಲಿಯಾರ್ ಮಾತನಾಡಿ, ಇದೇ ವರ್ಷ ಆಗಸ್ಟ್ 6ರಂದು ಸಿದ್ದಾರ್ಥ ಬಡಾವಣೆಯಲ್ಲಿರುವ ಎಂ.ಓ.ಬಿ ಸಮುದಾಯ ಭವನದಲ್ಲಿ 6ನೇ ವರ್ಷದ ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿದೆ, ರಾಜ್ಯ ವಿವಿಧ ಜಿಲ್ಲೆಗಳಿಂದ ಕರಾಟೆ ಪಟುಗಳು ಆಗಮಿಸಲಿದ್ದು, ಅವರೊಂದಿಗೆ ನಮ್ಮ ವಿದ್ಯಾರ್ಥಿಗಳು ಸೆಣಸಲಿದ್ದಾರೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕರಾಟೆ ತರಬೇತಿ ಪಡೆದ ವಿವಿಧ ಬೆಲ್ಟ್ ನ ವಿದ್ಯಾರ್ಥಿಗಳು ಕರಾಟೆ ಪ್ರದರ್ಶನ ನೀಡಿದರು. ಪೋಷಕರು, ಗಣ್ಯರಿಂದ ಸಭಾಸ್‌ಗಿರಿ ಪಡೆದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಕ್ಯಾಪ್ಟನ್ ಹರೀಸ್ ಕುಮಾರ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ, ಸಚಿನ್ ಕುಮಾರ್, ಗೌತಮ್, ಶರತ್ ಮತ್ತಿತರರಿದ್ದರು.




