ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಮಂಡ್ಯ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿ, ವಿಸ್ತರಣೆಗೊಳಿಸಿ ಅತ್ಯುತ್ತಮ ಸಾಧನೆ ಮಾಡಿ, ಜನರ ಪರಿವರ್ತನೆ ವಿಶೇಷ ಕೊಡುಗೆ ನೀಡಿದೆ ಎಂದು ಸಂಸ್ಥೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ತಿಳಿಸಿದರು.
ಜನ ಕಲ್ಯಾಣ ಕಾರ್ಯಕ್ರಮವನ್ನು ಯಶಸ್ವಿ ಅನುಷ್ಠಾನಗೊಳಿಸಲು 837 ಕಾರ್ಯಕರ್ತರು, ತಮ್ಮನ್ನು ತಾವು ಕೊಡಗಿಸಿಕೊಂಡು ಯೋಜನೆಯ ಯಶಸ್ಸಿಗೆ ನಿರಂತರ ಸೇವೆಯನ್ನು ನೀಡುತ್ತಿದ್ದಾರೆ. ಗ್ರಾಮ ಮಟ್ಟದಲ್ಲಿ ಸೇವಾ ಪ್ರತಿನಿಧಿಗಳು, ಮೇಲ್ವಿಚಾರಕರು, ಯೋಜನಾಧಿಕಾರಿಗಳು ವಿವಿಧ ರೀತಿಯ ಹುದ್ದೆಯಲ್ಲಿ ಜನಸಾಮಾನ್ಯರ ಮನೆ ಬಾಗಿಲಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಸಂದಿಸಿ ಪ್ರಗತಿಗೆ ಸಹಕರಿಸುತ್ತಿದ್ದಾರೆಂದು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವಸಹಾಯ ಸಂಘ ಚಳವಳಿ
ಸಂಘಟನೆಯ ಮೂಲಕ ಪ್ರಗತಿಯನ್ನು ಸಾಧಿಸಲು ಕೂಲಿ ಕಾರ್ಮಿಕರ, ಕೃಷಿಕರ, ಮಹಿಳೆಯರ, ದುರ್ಬಲ ವರ್ಗದವರನ್ನು ಸಂಘಟಿಸಿ, ಉಳಿತಾಯದ ಮನೋಭಾವನೆಯ ಮೂಲಕ ಅರಿವು ಮೂಡಿಸಿ, ವಾರಕ್ಕೊಮ್ಮೆ ಸೇರಿ ಅವರ ಸಮಗ್ರ ಅಭಿವೃದ್ಧಿಗೆ ಚಿಂತಿಸಿ ಉಳಿತಾಯ, ಆರ್ಥಿಕ ಶಿಸ್ತು ಮೂಡಿಸಲು ಇದುವರೆಗೆ 16,381 ಸ್ವ ಸಹಾಯ ಸಂಘಗಳನ್ನು ರಚನೆ ಮಾಡಲಾಗಿದೆ. ಪ್ರಸ್ತುತ ವರ್ಷ 1,41 ಲಕ್ಷ ಸದಸ್ಯರಿದ್ದು, ಒಟ್ಟು 90.96 ಕೋಟಿ ಉಳಿತಾಯ ಮಾಡಿ, ವಿವಿಧ ಬ್ಯಾಂಕ್ ಗಳಲ್ಲಿ ಜಮೆ ಮಾಡಲಾಗಿದೆ ಎಂದರು.
ಮನೆ ಬಾಗಿಲಿಗೆ ಬ್ಯಾಂಕಿಂಗ್ ವ್ಯವಸ್ಥೆ
ಸ್ವಸಹಾಯ ಸಂಘದ ಸದಸ್ಯರ ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಸ್ವ ಉದ್ಯೋಗ ಹಾಗೂ ಮೂಲ ಸೌಕರ್ಯಕ್ಕೆ ಬೇಕಾದ ಆರ್ಥಿಕ ಅವಶ್ಯಕತೆಗಳನ್ನು ಪೊರೈಸಲು ಬ್ಯಾಂಕ್ಗಳಿಂದ ನೇರ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಮನೆ ಬಾಗಿಲಿಗೆ ಸುಲಭ ರೀತಿಯಲ್ಲಿ ಸೌಲಭ್ಯ ಒದಗಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡದಿಂದ ಸರಿಸುಮಾರು ಪ್ರಸ್ತುತ ವರ್ಷ ರೂ. 468 ಕೋಟಿ ಮತ್ತು ಇದುವರೆಗೂ ರೂ. 3581 ಕೋಟ ಪ್ರಗತಿನಿಧಿಯಾಗಿ ಆರ್ಥಿಕ ನೆರವನ್ನು ಒದಗಿಸಲಾಗಿದೆ. ಸಂಘಗಳ ಸದಸ್ಯರ, ಹೊರಬಾಕಿ ಪ್ರತಿ ನಿಧಿ ರೂ 577.77 ಕೋಟಿ ಇದ್ದು, ವಾರದ ಕಂತಿನಲ್ಲಿ ಶೇ. 100 ಮರುಪಾವತಿ ಮಾಡುವುದರೊಂದಿಗೆ ಪಾಲುದಾರ ಬಂದುಗಳು ಸಲದ ಸದ್ವಿನಿಯೋಗ ಮಾಡಿಕೊಂಡು ಪ್ರಗತಿಯತ್ತ ಸಾಗುತ್ತಿದ್ದರೆ ಎಂದರು.
ಮಹಿಳಾ ಸ್ವಾವಲಂಬನೆ
ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರ. ಈ ದೃಷ್ಟಿಯಿಂದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದನ್ವಯ ಮಹಿಳೆಯರಿಗೆ, ಕೌಟುಂಬಿಕ ಸಾಮರಸ್ಯ, ಆರೋಗ್ಯ ಮತ್ತು ನೈರ್ಮಲ್ಯ, ಮಕ್ಕಳ ಶಿಕ್ಷಣ, ಸರ್ಕಾರಿ ಯೋಜನೆಗಳು, ಕಾನೂನು ಸಲಹೆಗಳು ಹಾಗೂ ಸ್ವ-ಉದ್ಯೋಗದ ಕುರಿತು ಮಾಹಿತಿ ಒದಗಿಸಲು 4-5 ಸಂಘಗಳು ತಿಂಗಳಿಗೊಮ್ಮೆ ಒಂದು ಕಡೆ ಸೇರಿ ಸಮಾಲೋಚನೆ ಮೂಲಕ ಮಾಹಿತಿ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 148 ಕೇಂದ್ರಗಳ ಮೂಲಕ 7,500 ಸದಸ್ಯರು ಸೇರಿ ಆತ್ಮ ವಿಶ್ವಾಸ ಪಡೆದು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕನ್ನು ನಡೆಸಲು ಸಹಕಾರಿಯಾಗಿದೆ ಎಂದರು.
ನಮ್ಮೂರ ಕೆರೆ (ಕೆರೆ ಹೂಳೆತ್ತುವ ಯೋಜನೆ)
ಪ್ರಕೃತಿ ವಿಕೋಪದಿಂದ ಮಳೆಯ ಕೊರತೆ ಯಾಗಿದ್ದು ವರ್ಷಗಳು ಕಳದಂತೆ, ಅಂತರ್ಜಲ ಮಟ್ಟದ ಕುಸಿತ ಮತ್ತು ಪರಿಸರ ಅಸಮತೋಲನ ಹೋಗಲಾಡಿಸಲು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 126 ಲಕ್ಷ ರೂ.ಗಳ ಕ್ಷೇತ್ರದ ಅನುದಾನದಲ್ಲಿ 16 ಕೆರೆಗಳನ್ನು ಅಭಿವೃದ್ದಿಪಡಿಸಿ 6053 ಕುಟುಂಬಗಳಿಗೆ ನೀರು ಹಾಗೂ 3,000 ಎಕರೆ ಜಮೀನಿಗೆ ಅಂತರ್ಜಲ ಒದಗಿಸಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಚೇತನಾ ಎಂ, ವಿವಿಧ ಪದಾಧಿಕಾರಿಗಳಾದ ಪಾಂಡ್ಯನ್, ರವಿ, ಯೋಗೀಶ್, ಸುವರ್ಣ ಹಾಗೂ ಮಮತಾಶೆಟ್ಟಿ ಉಪಸ್ಥಿತರಿದ್ದರು.




