Friday, November 20, 2026

ಪ್ರಾಯೋಗಿಕ ಆವೃತ್ತಿ

ಸುಮ್ಮನಿದ್ದೆವು…

✍️ ಹುಲಿಕುಂಟೆ ಮೂರ್ತಿ

ಕಣ್ಣ ಸನ್ನೆಯಲ್ಲೇ ಹೊರಗಿಟ್ಟು
ಬೀಗಿದಿರಿ… ಸುಮ್ಮನಿದ್ದೆವು…

ನಮ್ಮಕ್ಕ ತಂಗೇರ ಮೈಯುಂಡು
ನಕ್ಕಿರಿ… ಸುಮ್ಮನಿದ್ದೆವು…

ನಾವುತ್ತ ಹೊಲಗಳಲ್ಲೇ
ಹೊಡೆದು ಕೊಂದಿರಿ.. ಸುಮ್ಮನಿದ್ದೆವು..

ನಮ್ಮ ಬಟ್ಟೆಗೆ, ಓದಿಗೆ, ವಾಚಿಗೆ, ಮೊಬೈಲ್ ರಿಂಗ್ ಟೋನಿಗೆ
ಕನಲಿದಿರಿ.. ಬಾಲ ತುಳಿದ‌ ನಾಯಿಗಳ ಹಾಗೆ ಒದ್ದಾಡಿದಿರಿ…
ಆಗಲೂ ಸುಮ್ಮನಿದ್ದೆವು….

ಸುಮ್ಮನಿದ್ದರೂ ಬುಲೆಟ್ಟುಗಳ ಬಳಸುತ್ತಿದ್ದೀರಿ ಎಂದರೆ
ಈಗ ನಿಮ್ಮ ಬೀಜಗಳಲ್ಲಿ ನಡುಕ‌ ಹುಟ್ಟಿರಬೇಕು..

ನಮ್ಮ ರಕ್ತವೂ ಮನುಷ್ಯರೆಲ್ಲರ ಹಾಗೆ ಕುದಿಯುತ್ತದೆ….
ಈಗ ನಾವು ಸಾಯುವುದನ್ನು ಮುಂದೂಡಿದ್ದೇವೆ. ಅಪ್ಪ ಬಾಬಾಸಾಹೇಬರು ಕೊಟ್ಟ ಸಂವಿಧಾನವಿದೆ…. ನೀವಿನ್ನು ಬದುಕಲು ಸಿದ್ಧರಾಗಿ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ